ನವದೆಹಲಿ: ವಿರೋಧಿಗಳಿಗೆ ಬ್ರಹ್ಮೋಸ್ ಕ್ಷಿಪಣಿ ಸ್ಪಷ್ಟ ಸಂದೇಶ ಕೊಟ್ಟಿದೆ. ಭಾರತದಲ್ಲಿ ಭಯೋತ್ಪಾದನೆ ಬೆಳೆಯಲು ಬಿಡಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಘಟಕ ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ, ಭಾರತದ ಒಂದು ಶಕ್ತಿಯಾಗಿದೆ. ಭಾರತದ ಶಕ್ತಿ, ಸಾಮರ್ಥ್ಯ ಏನೆಂಬುದು ವಿಶ್ವಕ್ಕೆ ಮತ್ತೊಮ್ಮೆ ಗೊತ್ತಾಗಿದೆ ಎಂದರು.
ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆಸಲಾಗಿದ್ದು, ಸೇನೆಗೆ ಅಭಿನಂದನೆಗಳು. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಮ್ಧೂರ್ ಮೂಲಕ ಉಗ್ರರಿಗೆ ತಕ್ಕ ಉತ್ತರ ನೀಡಲಾಗಿದೆ ಎಂದರು.
ಆಪರೇಷನ್ ಸಿಂಧೂರ್ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಲಾಗಿದೆ. ಉಗ್ರರಿಗೆ ಭಾರತ ಸುರಕ್ಷಿತ ಸ್ಥಳವಲ್ಲವೆಂದು ಸಂದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಭಾರತದಲ್ಲಿ ಭಯೋತ್ಪಾದನೆ ಬೆಳೆಯಲು ಬಿಡಲ್ಲ ಎಂದು ತಿಳಿಸಿದರು.