ʼಭಾರತ್ ಜೋಡೋʼ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದು ರೇನ್‌ ಕೋಟ್: ಕಾಂಗ್ರೆಸ್ ಸ್ಪಷ್ಟನೆ

ಕಾಶ್ಮೀರದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿರುವುದು ಜಾಕೆಟ್ ಅಲ್ಲ ರೇನ್ ಕೋಟ್ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಳೆಯಿಂದಾಗಿ ರಾಹುಲ್ ಗಾಂಧಿ ರೇನ್ ಕೋಟ್ ಧರಿಸಿದ್ದರು. ಮಳೆ ನಿಂತ ಮೇಲೆ ರೇನ್ ಕೋಟ್ ತೆಗೆದರು ಎಂದು ತಿಳಿಸಿದೆ.

ಇದುವರೆಗೂ ಯಾತ್ರೆಯುದ್ದಕ್ಕೂ ಚಳಿಯಲ್ಲೂ ಟೀ ಶರ್ಟ್ ಧರಿಸಿ ಸಾಗುತ್ತಿದ್ದ ರಾಹುಲ್ ಗಾಂಧಿ ಭಾರೀ ಸುದ್ದಿಯಾಗಿದ್ರು. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಹರಿದ ಬಟ್ಟೆಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ತಾವು ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ಬಹಿರಂಗಪಡಿಸಿದ್ದರು. ಆದರೆ ಇದೀಗ ರಾಹುಲ್ ಜಾಕೆಟ್ ಧರಿಸಿ ಸಾಗುತ್ತಿದ್ದಾರೆಂದು ಸುದ್ದಿಯಾದ ಬೆನ್ನಲ್ಲೇ ಪಕ್ಷ “ಇದು ರೇನ್‌ಕೋಟ್, ಜಾಕೆಟ್ ಅಲ್ಲ! ಮಳೆ ಮುಗಿದ ಬಳಿಕ ರೇನ್ ಕೋಟ್ ಹೋಯ್ತು” ಎಂದು ತಿಳಿಸಿದೆ.

https://twitter.com/WestBengalPMC/status/1616362466807812098?ref_src=twsrc%5Etfw%7Ctwcamp%5Etweetembed%7Ctwterm%5E1616362466807812098%7Ctwgr%5E3c03fd947e41d41780dabea82687fcf08ced47b8%7Ctwcon%5Es1_&ref_url=https%3A%2F%2Fwww.hindustantimes.com%2Findia-news%2F-raincoat-not-jacket-congress-on-rahul-gandhi-amid-bharat-jodo-watch-101674207384945.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read