ಬೆಂಗಳೂರು : ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೇ 6 ರವರೆಗೂ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, , ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಯಾದಗಿರಿ, ಬಳ್ಳಾರಿ, , ಚಾಮರಾಜನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರಿನ ಹಲವು ಕಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಜಯಪುರ, ಕೊಪ್ಪ ಕಡೆ ಕಳೆದ 1 ತಿಂಗಳಿನಿಂದ ಭಾರಿ ಮಳೆಯಾಗುತ್ತಿದೆ.
ಡೀಸೆಲ್ ಉಳಿತಾಯ
ಮಲೆನಾಡಿನ ಭಾಗದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಅಡಿಕೆ, ಕಾಫಿ ತೋಟಗಳು ಹಸಿರಾಗಿದೆ. ಮಳೆ ಬಾರದೇ ಹೋಗಿದ್ದರೆ ರೈತರು ತೋಟಗಳಿಗೆ ನೀರು ಹಾಯಿಸಲು ಡೀಸೆಲ್ ಗಾಗಿ ಭಾರಿ ಹಣ ವ್ಯಯಿಸಬೇಕಾಗಿತ್ತು. ಆದರೆ ಮಳೆ ಬಂದ ಹಿನ್ನೆಲೆ ರೈತರು ಕಳೆದ 1 ತಿಂಗಳಿನಿಂದ ಮೋಟಾರ್ ಚಾಲನೆ ಮಾಡಿಲ್ಲ. ಇದರಿಂದ ಡೀಸೆಲ್ ಗೆ ಖರ್ಚು ಮಾಡಬೇಕಾಗಿದ್ದ ಹಣ ಕೂಡ ಉಳಿತಾಯ ಆಗಿದೆ.