BIG NEWS : ‘ರೈಲ್ವೇ ಪ್ರಯಾಣಿಕರೇ ಗಮನಿಸಿ’ : ಈ ಮಾರ್ಗದಲ್ಲಿ ಭಾಗಶಃ ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ.!

ಬೆಂಗಳೂರು : ರೈಲ್ವೇ ಪ್ರಯಾಣಿಕರೇ ಗಮನಿಸಿ, ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.

ಬೈಯಪ್ಪನಹಳ್ಳಿ-ಹೊಸೂರು ನಡುವಿನ ಜೋಡಿ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ, ಮರನಾಯಕನಹಳ್ಳಿ ಯಾರ್ಡನಲ್ಲಿ ರಸ್ತೆ ಕೆಳ ಸೇತುವೆ (ಸಂಖ್ಯೆ 427A) ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ, ಕೆಳಕಂಡ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಮಾರ್ಗ ಬದಲಾಯಿಸಲಾಗಿದೆ.ರೈಲುಗಳ ಭಾಗಶಃ ರದ್ದು: ಜುಲೈ 5, 7, ಮತ್ತು 8, 2025 ರಂದು ಮೂರು ದಿನಗಳ ಕಾಲ ಕೆಳಕಂಡ ಮೆಮು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 06591 ಯಶವಂತಪುರ – ಹೊಸೂರು, ರೈಲು ಸಂಖ್ಯೆ 66563 ಯಶವಂತಪುರ – ಹೊಸೂರು, ಮತ್ತು ರೈಲು ಸಂಖ್ಯೆ 66585 ಯಶವಂತಪುರ – ಹೊಸೂರು ರೈಲುಗಳು ಹೀಲಲಿಗೆ ಮತ್ತು ಹೊಸೂರು ನಡುವೆ ಭಾಗಶಃ ರದ್ದಾಗುತ್ತವೆ. ಈ ರೈಲುಗಳು ಹೀಲಲಿಗೆ ನಿಲ್ದಾಣದಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸುತ್ತವೆ.
ಅದೇ ರೀತಿ, ರೈಲು ಸಂಖ್ಯೆ 06592 ಹೊಸೂರು ಯಶವಂತಪುರ, ರೈಲು ಸಂಖ್ಯೆ 66564 ಹೊಸೂರು ಯಶವಂತಪುರ, ಮತ್ತು ರೈಲು ಸಂಖ್ಯೆ 66586 ಹೊಸೂರು – ಯಶವಂತಪುರ ರೈಲುಗಳು ಹೊಸೂರು ಮತ್ತು ಹೀಲಲಿಗೆ ನಡುವೆ ಭಾಗಶಃ ರದ್ದಾಗುತ್ತವೆ. ಈ ರೈಲುಗಳು ತಮ್ಮ ನಿಗದಿತ ನಿರ್ಗಮನ ಸಮಯಕ್ಕೆ ಹೊಸೂರಿನ ಬದಲು ಹೀಲಲಿಗೆಯಿಂದ ಹೊರಡಲಿವೆ.

ರೈಲುಗಳ ಮಾರ್ಗ ಬದಲಾವಣೆ: ಕೆಳಕಂಡ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ ಜುಲೈ 6, 2025 ರಂದು ಪ್ರಾರಂಭವಾಗುವ ಪ್ರಯಾಣಗಳಲ್ಲಿ ಮಾರ್ಗ ಬದಲಾವಣೆಗೊಳ್ಳುತ್ತವೆ:’
ರೈಲು ಸಂಖ್ಯೆ 20641 ಬೆಂಗಳೂರು ಕಂಟೋನ್ಸೆಂಟ್ – ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ಕಂಟೋನ್ಸೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತೂರು, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ಪ್ರಯಾಣದಲ್ಲಿ ಹೊಸೂರು ಮತ್ತು ಧರ್ಮಪುರಿ ನಿಲುಗಡೆಗಳು ಇರುವುದಿಲ್ಲ.
ರೈಲು ಸಂಖ್ಯೆ 16211 ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಹೆಬ್ಬಾಳಿ, ಬಾಣಸವಾಡಿ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರಪೇಟೆ, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಇದು ಬೆಳಂದೂರು ರಸ್ತೆ ಮತ್ತು ಓಮಲೂರು ನಡುವಿನ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 17235 ಎಸ್‌ಎಂವಿಟಿ ಬೆಂಗಳೂರು-ನಾಗರಕೋಯಿಲ್ ಎಕ್ಸ್‌ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತೂರು, ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹೊಸೂರು ಮತ್ತು ತದೆ.” ಧರ್ಮಪುರಿ ನಿಲುಗಡೆಗಳನ್ನು ಕಳೆದುಕೊಳ್ಳುತ್ತದೆ.

ರೈಲು ಸಂಖ್ಯೆ 20642 ಕೊಯಮತ್ತೂರು – ಬೆಂಗಳೂರು ಕಂಟೋನ್ಸೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇಲಂ, ತಿರುಪತೂರು, ಜೊ ಜೋಲಾರಪೇಟೆ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮತ್ತು ಬೆಂಗಳೂರು ಕಂಟೋನ್ಸೆಂಟ್ ಮಾರ್ಗವಾಗಿ ಸಂಚರಿಸಲಿದೆ. ಇದು ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲು ಸಂಖ್ಯೆ 11014 ಕೊಯಮತ್ತೂರು- ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೆ ಎ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮತ್ತು ಬೆಂಗಳೂರು ಕಂಟೋನ್ಸೆಂಟ್ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೂ ಸಹ ಧರ್ಮಪುರಿ ಮತ್ತು ಹೊಸೂರು ನಿಲುಗಡೆ ಇರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read