ತಾಂಬರಂ-ಮಂಗಳೂರು ಮತ್ತು ಕೊಚುವೇಲಿ- ಬೆಂಗಳೂರಿಗೆ ವಿಶೇಷ ರೈಲು ಸೇವೆ

ತಾಂಬರಂನಿಂದ ಮಂಗಳೂರಿಗೆ ಮತ್ತು ಕೊಚುವೇಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ತಾಂಬರಂನಿಂದ ವಿಶೇಷ ರೈಲು (06041) ಏಪ್ರಿಲ್ 25, ಮೇ 2, 9, 16, 23, 30, ಜೂನ್ 6, 13, 20 ಮತ್ತು 17 ರಂದು ಸೇವೆಗಳನ್ನು ನೀಡಲಿದೆ. ತಾಂಬರಂನಿಂದ ಮಧ್ಯಾಹ್ನ 1.30 ಕ್ಕೆ ಪ್ರಾರಂಭವಾಗುವ ರೈಲು ಬೆಳಿಗ್ಗೆ 6.45 ಕ್ಕೆ ಮಂಗಳೂರಿಗೆ ತಲುಪಲಿದೆ.

ಮಂಗಳೂರಿನಿಂದ (06042) ಹಿಂದಿರುಗುವ ಸೇವೆಯು ಏಪ್ರಿಲ್ 26, ಮೇ 3, 10, 17, 24, 31, ಜೂನ್ 7, 14, 21, ಮತ್ತು 28 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಬೆಳಿಗ್ಗೆ 4.45 ಕ್ಕೆ ತಾಂಬರಂ ರೈಲು ನಿಲ್ದಾಣವನ್ನು ತಲುಪಲಿದೆ. ಈ ರೈಲಿಗೆ ಎಗ್ಮೋರ್, ಪೆರಂಬೂರ್, ಅರಕ್ಕೋಣಂ, ಕಟ್ಪಾಡಿ, ಜೋಲಾರ್‌ಪೆಟ್ಟೈ, ಸೇಲಂ, ಈರೋಡ್, ತಿರುಪುರ್, ಕೊಯಮತ್ತೂರು, ಪಾಲಕ್ಕಾಡ್, ಒಟ್ಟಪಾಲಂ, ಶೋರನೂರು, ಕುಟ್ಟಿಪ್ಪುರಂ, ತಿರೂರ್, ಫೆರೋಕ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರ್, ಕಾಂಞಂಗಾಡ್ ಮತ್ತು ಕಾಸರಗೋಡುಗಳಲ್ಲಿ ನಿಲುಗಡೆ ಇರುತ್ತದೆ.

ಕೊಚುವೇಲಿ-ಬೆಂಗಳೂರು ವಿಶೇಷ ರೈಲು (06038) ಕೊಚುವೇಲಿಯಿಂದ ಏಪ್ರಿಲ್ 25, ಮೇ 2, 9, 16, 23, 30, ಜೂನ್ 6, 13, 20 ಮತ್ತು 27 ರಂದು ಸಂಜೆ 6.05 ಕ್ಕೆ ಸೇವೆಯನ್ನು ಪ್ರಾರಂಭಿಸುತ್ತದೆ. ರೈಲು ಮರುದಿನ ಬೆಳಿಗ್ಗೆ 10.55 ಕ್ಕೆ ಬೆಂಗಳೂರು ತಲುಪಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read