ಬಸ್ ಗೆ ಡಿಕ್ಕಿ ಹೊಡೆದ ರೈಲು; ಭೀಕರ ಅಪಘಾತದ ವಿಡಿಯೋ ವೈರಲ್

ಬಾಂಗ್ಲಾದೇಶದ ಢಾಕಾದ ಮಾಲಿಬಾಗ್ ಪ್ರದೇಶದಲ್ಲಿ ರೈಲು ಬಸ್‌ಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 9.10ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬುಧವಾರ ಪಂಚಗಢಕ್ಕೆ ತೆರಳುತ್ತಿದ್ದ ದ್ರುತಜನ್ ಎಕ್ಸ್ ಪ್ರೆಸ್ ಮಾಲಿಬಾಗ್ ರೈಲ್ವೆ ಗೇಟ್‌ನಲ್ಲಿ ಸೊಹಾಗ್ ಪರಿಬಹಾನ್ ಪ್ಯಾಸೆಂಜರ್ ಬಸ್‌ಗೆ ಡಿಕ್ಕಿ ಹೊಡೆದಿದೆ.

ಮಾಲಿಬಾಗ್ ಮತ್ತು ಮೌಚಕ್ ಪ್ರದೇಶಗಳಲ್ಲಿ ಪ್ರಯಾಣಿಕರು ಇಳಿದಿದ್ದರಿಂದ ಬಸ್ ಖಾಲಿಯಾಗಿತ್ತು. ರೈಲು ಬರುತ್ತಿರುವುದನ್ನು ಕಂಡ ಬಸ್ ಚಾಲಕ ಸೇರಿದಂತೆ ಬಸ್ ನಲ್ಲಿದ್ದ ಕೆಲವು ಮಂದಿ ಬಸ್ ನಿಂದ ಬೇಗನೆ ಕೆಳಗೆ ಇಳಿದರು. ಹೀಗಾಗಿ ಯಾವುದೇ ಸಾವು-ನೋವು ಅಥವಾ ಗಾಯಗಳ ವರದಿಯಾಗಿಲ್ಲ .

ಬಸ್ ಮತ್ತು ರೈಲು ಡಿಕ್ಕಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ್ತಿದೆ. ಅಪಘಾತದಿಂದ ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳ ನಡುವಿನ ರೈಲು ಸಂಪರ್ಕವು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿತು. ರಾತ್ರಿ 11 ಗಂಟೆಗೆ ರೈಲು ಹಳಿಯಿಂದ ಬಸ್ ತೆಗೆದ ನಂತರ ರೈಲು ಸಂಚಾರ ಮತ್ತೆ ಆರಂಭವಾಯಿತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read