ವಿವಾದಕ್ಕೆ ಕಾರಣವಾಗಿದೆ ನಟಿ ‘ಐಶ್ವರ್ಯಾ ರೈ’ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ..!

ನವದೆಹಲಿ : ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರು ನಟಿ ‘ಐಶ್ವರ್ಯಾ ರೈ’ ಬಗ್ಗೆ ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.

ರಾಹುಲ್ ಗಾಂಧಿ ಅವರು ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಅವರ ಈ ನಡವಳಿಕೆಗೆ ಖ್ಯಾತ ಹಾಡುಗಾರ್ತಿ ಸೋನಾ ಮೋಹಾಪಾತ್ರ   ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆತ್ಮೀಯ ರಾಹುಲ್ ಗಾಂಧಿ , ಖಚಿತವಾಗಿ ಯಾರಾದರೂ ನಿಮ್ಮ ಸ್ವಂತ ತಾಯಿ (ಸೋನಿಯಾ ಗಾಂಧಿ), ಸಹೋದರಿ (ಪ್ರಿಯಾಂಕಾ ಗಾಂಧಿ) ಅವರನ್ನು ಈ ಹಿಂದೆಯೂ ಇದೇ ರೀತಿ ಕೀಳಾಗಿ ನೋಡಿದ್ದಾರೆ ಮತ್ತು ಅದನ್ನು ಲೆಕ್ಕಿಸದೆ ನೀವು ಚೆನ್ನಾಗಿ ತಿಳಿದುಕೊಳ್ಳಬೇಕಲ್ಲವೇ? ಅಲ್ಲದೆ, ಐಶ್ವರ್ಯಾ ರೈ ಸುಂದರವಾಗಿ ನೃತ್ಯ ಮಾಡುತ್ತಾರೆ ಎಂದಿದ್ದಾರೆ.

https://twitter.com/sonamohapatra/status/1760163732712562850?ref_src=twsrc%5Etfw%7Ctwcamp%5Etweetembed%7Ctwterm%5E1760163732712562850%7Ctwgr%5E15722382e742838edb0a6cdf56e18f89c60da6d4%7Ctwcon%5Es1_&ref_url=https%3A%2F%2Fvijaykarnataka.com%2Fnews%2Findia%2Fkarnataka-bjp-singer-sona-mohapatra-slams-rahul-gandhi-over-demeaning-aishwarya-rai%2Farticleshow%2F107903930.cms

ಜನವರಿ 22ರಂದು ಅಯೋಧ್ಯೆದಲ್ಲಿ ನಡೆದ ರಾಮ ಮಂದಿರ ಉದ್ಘಾಟನೆ ಸಮಾರಂಭದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಹೆಸರು ಪ್ರಸ್ತಾಪಿಸಿದ್ದರು. ಇತರೆ ಹಿಂದುಳಿದ ವರ್ಗಗಳ ಜನರನ್ನು ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ. ಆದರೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಅವರೆಲ್ಲ ಬಂದಿದ್ದರು ಎಂದು ಹೇಳಿದ್ದರು. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನೀವು ನೋಡಿದ್ದಿರಾ? ಅಲ್ಲಿ ಒಂದೇ ಒಂದು ಒಬಿಸಿ ಮುಖ ಇತ್ತೇ? “ಇದರಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆದರೆ ದೇಶವನ್ನು ನಿಜವಾಗಿಯೂ ನಡೆಸುವ ಜನರನ್ನು ನಾವು ನೋಡಲಿಲ್ಲ ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read