ಬೆಂಗಳೂರು : ರಾಹುಲ್ ಗಾಂಧಿ ‘ಫುಲೆ’ ಸಿನಿಮಾ ನೋಡಿ ಅದನ್ನು ಶ್ಲಾಘಿಸಿದ್ದಾರೆ – ಎಷ್ಟು ವಿಪರ್ಯಾಸ ಎಂದು ನಟ ಚೇತನ್ ಅಹಿಂಸಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ ರಾಹುಲ್ ಗಾಂಧಿ ‘ಫುಲೆ’ ಸಿನಿಮಾ ನೋಡಿ ಅದನ್ನು ಶ್ಲಾಘಿಸಿದ್ದಾರೆ – ಎಷ್ಟು ವಿಪರ್ಯಾಸ. ಜ್ಯೋತಿಬಾ ಫುಲೆ ಕಾಂಗ್ರೆಸ್ ಅನ್ನು ವಿರೋಧಿಸಿದ್ದಲ್ಲದೆ, ಬ್ರಿಟಿಷರಿಂದ ‘ಸ್ವರಾಜ್’ ಎಂಬ ಕಾಂಗ್ರೆಸ್ ಯೋಜನೆಯ ಬಗ್ಗೆ ಫುಲೆ ನಿರಂತರ ಸಂದೇಹ ವ್ಯಕ್ತಪಡಿಸಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ಅಧ್ಯಯನ ಮಾಡಬೇಕು.
21 ನೇ ಶತಮಾನದ ಕಾಂಗ್ರೆಸ್ — ಬ್ರಾಹ್ಮಣ್ಯ/ಬಂಡವಾಳಶಾಹಿ/ಇತ್ಯಾದಿ ಪ್ರಾಬಲ್ಯವನ್ನು ಬೆಂಬಲಿಸುವ ಮತ್ತು ಬೇರೂರಿಸುವ ಪಕ್ಷವನ್ನು — ನಾವು ಸಮಾನತಾವಾದಿಗಳು ವಿರೋಧಿಸಲೇಬೇಕು ಎಂದು ಹೇಳಿದ್ದಾರೆ.

You Might Also Like
TAGGED:ರಾಹುಲ್ ಗಾಂಧಿ