ಮತದಾರರ ಸೆಳೆಯಲು ಚುನಾವಣೆ ಕಾರ್ಯತಂತ್ರ ಬದಲಿಸಿದ ಕಾಂಗ್ರೆಸ್

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಕಾರ್ಯತಂತ್ರ ಬದಲಾವಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕೂಡ ಪ್ರಚಾರದ ಕಾರ್ಯತಂತ್ರ ಬದಲಿಸಿಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ವಿಧಾನಸಭಾ ಕ್ಷೇತ್ರವಾರು ಪ್ರಚಾರಕ್ಕೆ ಕರೆ ತರಲು ಮುಂದಾಗಿದೆ.

ಬಿಸಿಲ ಬೇಗೆ ಮತ್ತು ಜನರನ್ನು ಸೇರಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಸಮಾವೇಶಗಳ ಬದಲಿಗೆ ರೋಡ್ ಶೋಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ರೋಡ್ ಶೋ ಯಶಸ್ಸು ಕಂಡಿದ್ದು, ಕಾಂಗ್ರೆಸ್ ಕೂಡ ವಿಭಾಗವಾರು ಸಮಾವೇಶಗಳನ್ನು ನಡೆಸುವ ಬದಲು ರೋಡ್ ಶೋಗೆ ಆದ್ಯತೆ ನೀಡಲು ಮುಂದಾಗಿದೆ.

ವಿಭಾಗವಾರು ಸಮಾವೇಶ ನಡೆಸಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಕರೆತರಲು ಮತ್ತು ಹೆಚ್ಚಿನ ಜನರನ್ನು ಸೇರಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಕಾರ್ಯತಂತ್ರ ಬದಲಿಸಿಕೊಂಡಿರುವ ಕಾಂಗ್ರೆಸ್ ನೇರವಾಗಿ ಮತದಾರರನ್ನು ಭೇಟಿಯಾಗಲು ರಾಹುಲ್ ಗಾಂಧಿಯವರನ್ನು ಕ್ಷೇತ್ರವಾರು ಚುನಾವಣಾ ಪ್ರಚಾರಕ್ಕೆ ಕರೆತರಲು ಪ್ಲಾನ್ ಮಾಡಿಕೊಂಡಿದೆ.

ರೋಡ್ ಶೋಗಳಲ್ಲಿ ಹೆಚ್ಚು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿರುವ ಕಾಂಗ್ರೆಸ್ ಮೇ 1 ರಂದು ತುರುವೇಕೆರೆ, ಅರಸೀಕೆರೆ, ಚಾಮರಾಜನಗರ, ಮೇ 2 ರಂದು ತೀರ್ಥಹಳ್ಳಿ, ಹರಿಹರ, ಚಿಕ್ಕಮಗಳೂರಿನಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇರವಾಗಿ ಮತದಾರರ ಭೇಟಿಯಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read