ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಅವತಾರದಿಂದಲೇ ಸದಾ ಸುದ್ದಿಯಲ್ಲಿರುವ ನಟಿ ರಾಗಿಣಿ ದ್ವಿವೇದಿ ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ತಮ್ಮಇಷ್ಟಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಅವರ ಹಾಟ್ ಫೋಟೋಗಳಿಗೆ ಲೈಕ್ಸ್ ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದ್ದು, ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಐಟಂ ಸಾಂಗ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ದ್ವಿವೇದಿ ಎಸ್ ಆರ್ ರಾಜನ್ ನಿರ್ದೇಶನದ ತಮಿಳಿನ ‘ಇಮೇಲ್’ ಚಿತ್ರದಲ್ಲಿ ಅಭಿನಯಿಸಿದ್ದರು. ಇತ್ತೀಚಿಗೆ ‘ಸ್ವಾರಿ ಕರ್ಮ ರಿಟರ್ನ್ಸ್’ ಹಾಗೂ ‘ವೃಷಭ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.