ನೂರಕ್ಕೆ ನೂರು ಗೆದ್ದು ಬರುತ್ತಿ: ಬಿಜೆಪಿ ಬಂಡಾಯ ಅಭ್ಯರ್ಥಿಗೆ ದೈವದ ಅಭಯ

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ದೈವ ಅಭಯ ನೀಡಿದೆ. ಮೇ 16 ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ರಘುಪತಿ ಭಟ್ ನಾಮಪತ್ರ ಸಲ್ಲಿಸಲಿದ್ದಾರೆ.

ಅವರ ಉಮೇದುವಾರಿಕೆಗೆ ದೈವ ಅಭಯ ನೀಡಿದೆ. ಮಂಗಳವಾರ ಕರಂಬಳ್ಳಿಯ ತಮ್ಮ ಮೂಲ ಮನೆಯಲ್ಲಿ ಕಲ್ಕುಡ ದೈವದ ಕೋಲ ನಡೆದಿದ್ದು, ನಿನ್ನ ನಿಲುವು ಸರಿ ಇದೆ. ನೂರಕ್ಕೆ ನೂರು ಗೆದ್ದು ಬರುತ್ತಿ ಎಂದು ದೈವದಿಂದ ಆಶೀರ್ವಾದ ದೊರೆತಿದೆ. ದೈವವನ್ನು ನಂಬುತ್ತೇನೆ. ನನಗೆ ಸ್ಪರ್ಧಿಸಲು ಹುಮ್ಮಸ್ಸು ಬಂದಿದೆ. ಪ್ರತಿ ವರ್ಷ ನಮ್ಮ ಮನೆಯಲ್ಲಿ ದೈವ ಕೋಲ ನಡೆಯುತ್ತದೆ ಎಂದು ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಹಿಂದೆ ಬೂತ್ ಮಟ್ಟದಲ್ಲಿ ಅಭಿಪ್ರಾಯ ಪಡೆದು ಪಕ್ಷದಲ್ಲಿ ದುಡಿದವರಿಗೆ, ಕಾರ್ಯಕರ್ತರಿಗೆ ಅವಕಾಶ ನೀಡುತ್ತಿದ್ದರು. ಈಗ ಹಿರಿಯ ಕಾರ್ಯಕರ್ತರನ್ನು ಬಿಟ್ಟು ಚಮಚಾಗಿರಿ ಮಾಡುವವರಿಗೆ ಟಿಕೆಟ್ ಕೊಡುತ್ತಿದ್ದಾರೆ. ನಾನು ಕಣದಿಂದ ಹಿಂದೆ ಸರಿಯುವುದಿಲ್ಲ. ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಹಿತೈಷಿಗಳ ಸಭೆ ನಡೆಸಿ, ಚುನಾವಣಾ ಕಾರ್ಯಾಲಯ ಉದ್ಘಾಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read