62 ಸಾವಿರ ರೂ. ಮೌಲ್ಯದ ಸ್ವೆಟರ್ ಧರಿಸಿದ ʼಆಮ್‌ ಆದ್ಮಿʼ ಸಂಸದ; ಫೋಟೋ ಹಂಚಿಕೊಂಡು ಕುಟುಕಿದ ಬಿಜೆಪಿ ನಾಯಕ

62 ಸಾವಿರ ರೂ. ಮೌಲ್ಯದ ಸ್ವೆಟರ್ ಧರಿಸಿರುವ ಎಎಪಿ ಸಂಸದ ರಾಘವ್ ಚಡ್ಡಾರ ಫೋಟೋವನ್ನ ಹಂಚಿಕೊಂಡ ಬಿಜೆಪಿ ನಾಯಕ, ಆಮ್ ಆದ್ಮಿ ಎಂದು ಹೇಳಿಕೊಳ್ಳುವ ಎಎಪಿ ಸಂಸದರ ಸರಳತೆ ನೋಡಿ ಎಂದು ಟೀಕಿಸಿದ್ದಾರೆ. ಪತ್ನಿ ಪರಿಣಿತಿ ಚೋಪ್ರಾ ಜೊತೆ ಹೊಸ ವರ್ಷ ಆಚರಿಸಿದ ಎಎಪಿ ಸಂಸದ ರಾಘವ್ ಚಡ್ಡಾ ಪೋಸ್ಟ್ ಮಾಡಿದ ಫೋಟೋ ಇದೀಗ ಚರ್ಚೆಗೆ ತಿರುಗಿದೆ. ತಮ್ಮ ರಜಾದಿನಗಳನ್ನು ಲಂಡನ್ ಮತ್ತು ಆಸ್ಟ್ರಿಯಾದಲ್ಲಿ ಕಳೆದಿರುವ ರಾಘವ್ ಚಡ್ಡಾ ದಂಪತಿ ಕ್ರಿಸ್ ಮಸ್ ಮತ್ತು ಹೊಸ ವರ್ಷವನ್ನು ಆಚರಿಸಿದ್ದರು. ಈ ಕ್ಷಣದ ಕೆಲ ಫೋಟೋಗಳನ್ನು ರಾಘವ್ ಚಡ್ಡಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಚಿತ್ರದಲ್ಲಿ ರಾಘವ್ ಚಡ್ಡಾ ಅವರು ದುಬಾರಿ ಸ್ವೆಟರ್ ಧರಿಸಿರುವುದನ್ನು ಕಾಣಬಹುದು. ಇದನ್ನು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ದೆಹಲಿ ಕಂಟೋನ್ಮೆಂಟ್ ಮಂಡಳಿಯ ಉಪಾಧ್ಯಕ್ಷ ಮನೀಶ್ ಸಿಂಗ್ ಟೀಕಿಸಿದ್ದಾರೆ.

ರಾಘವ್ ಚಡ್ಡಾ ಅವರನ್ನು ಕುಟುಕಿರುವ ಮನೀಶ್ ಸಿಂಗ್, ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಾಘವ್ ಚಡ್ಡಾ ಅವರ ಫೋಟೋವನ್ನು ಹಂಚಿಕೊಂಡಿದ್ದು “ಬಡ ಎಎಪಿ ನಾಯಕ 62,000 ರೂಪಾಯಿ ಮೌಲ್ಯದ ಸ್ವೆಟರ್ ಧರಿಸಿದ್ದಾರೆ” ಎಂದು ಹೇಳಿದ್ದಾರೆ.

ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಮೈಂತ್ರದಲ್ಲಿ ಈ ಸ್ವೆಟರ್ ಲಭ್ಯವಿದೆ. ಇದು ಪೋಲೋ ರಾಲ್ಫ್ ಲಾರೆನ್ ಗ್ರಾಫಿಕ್ ಪ್ರಿಂಟೆಡ್ ವೂಲನ್ ಸ್ವೆಟರ್ ಆಗಿದ್ದು, ಸ್ವೆಟರ್ ಬೆಲೆ 62,000 ರೂ.

ಆದರೆ ಮನೀಶ್ ಸಿಂಗ್ ವಿರುದ್ಧ ಹಲವು ನೆಟ್ಟಿಗರು ತಿರುಗಿಬಿದ್ದಿದ್ದಾರೆ. ರಾಘವ್ ಚಡ್ಡಾ ಅವರು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿದ್ದು 62,000 ರೂಪಾಯಿ ಮೌಲ್ಯದ ಸ್ವೆಟರ್ ಖರೀದಿಸುವ ಸಾಮರ್ಥ್ಯ ಅವರಿಗೆ ಇದೆ ಎಂದಿದ್ದಾರೆ. ಕೆಲವರು ಅವರ ಹೆಂಡತಿ, ರಾಘವ್ ಚಡ್ಡಾ ಅವರಿಗೆ ಸ್ವೆಟರ್ ಅನ್ನು ಉಡುಗೊರೆಯಾಗಿ ನೀಡಿರಬೇಕು ಎಂದು ಹೇಳಿದ್ದಾರೆ.

ಮತ್ತೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಹಂಚಿಕೊಂಡಿದ್ದು ಪ್ರಧಾನಿ 1.4 ಲಕ್ಷ ರೂಪಾಯಿ ಮೌಲ್ಯದ ಸನ್ ಗ್ಲಾಸ್ ಧರಿಸಿದ್ದಾರೆ ಎಂದು ಬಿಜೆಪಿ ನಾಯಕ ಮನೀಶ್ ಸಿಂಗ್ ರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ತನ್ನನ್ನು ತಾನು ಫಕೀರ ಎಂದು ಕರೆದುಕೊಳ್ಳುವ ಮತ್ತು ಲಕ್ಷಾಂತರ ಮೌಲ್ಯದ ಸೂಟ್‌ಗಳನ್ನು ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಎಂದು ಮನೀಶ್ ಸಿಂಗ್ ನಡೆಯನ್ನ ಟೀಕಿಸಿ ಪ್ರಶ್ನಿಸಿದ್ದಾರೆ.

https://twitter.com/MSinghBJP/status/1742157692960215175?ref_src=twsrc%5Etfw%7Ctwcamp%5Etweetembed%7Ctwterm%5E1742157692960215175%7Ctwgr%5E0202293ccce63db4189029a0d2910b9d7069f9b3%7Ctwcon%5Es1_&ref_url=https%3A%2F%2Fwww.freepressjournal.in%2Findia%2Fraghav-chadha-wears-sweater-worth-62000-in-new-year-pic-with-wife-parineeti-bjp-leader-takes-dig

https://twitter.com/Jaagruk_/status/1742197920060112904?ref_src=twsrc%5Etfw%7Ctwcamp%5Etweetembed%7Ctwterm%5E1742197920060112904%7Ctwgr%5E0202293ccce63db4189029a0d2910b9d7069f9b3%7Ctwcon%5Es1_&ref_url=https%3A%2F%2Fwww.freepressjournal.in%2Findia%2Fraghav-chadha-wears-sweater-worth-62000-in-new-year-pic-with-wife-parineeti-bjp-leader-takes-dig

https://twitter.com/imviru7/status/1742163217403810261?ref_src=twsrc%5Etfw%7Ctwcamp%5Etweetembed%7Ctwterm%5E1742163217403810261%7Ctwgr%5E0202293ccce63db4189029a0d2910b9d7069f9b3%7Ctwcon%5Es1_&ref_url=https%3A%2F%2Fwww.freepressjournal.in%2Findia%2Fraghav-chadha-wears-sweater-worth-62000-in-new-year-pic-with-wife-parineeti-bjp-leader-takes-dig

https://twitter.com/MSinghBJP/status/1742157692960215175?ref_src=twsrc%5Etfw%7Ctwcamp%5Etweetembed%7Ctwterm%5E1742163217403810261%7Ctwgr%5E0202293ccce63db4189029a0d2910b9d7069f9b3%7Ctwcon%5Es2_&ref_url=https%3A%2F%2Fwww.freepressjournal.in%2Findia%2Fraghav-chadha-wears-sweater-worth-62000-in-new-year-pic-with-wife-parineeti-bjp-leader-takes-dig

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read