AAP ಸಂಸದನ ಜೊತೆ ನಟಿ ಪರಿಣಿತಿ ಚೋಪ್ರಾ ಡೇಟಿಂಗ್‌ ? ಇಲ್ಲಿದೆ ರಾಘವ್ ಚಡ್ಡಾ ನೀಡಿದ ಸ್ಪಷ್ಟನೆ

Parineeti Chopra, Raghal Chadha Raghav Chadha Blushes, Reacts To Parineeti  Chopra Dating Rumours, Says 'Aapko Denge Jawaab...' | ડેટિંગના સવાલ પર  Raghal Chadhaએ તોડ્યું મૌન, કહ્યું- 'પરિણિતીથી નહી ...ರಾಜಕಾರಣಿ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿ ಹರಿದಾಡ್ತಿದ್ದು ಇದಕ್ಕೆ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದಾರೆ.

ಇಬ್ಬರೂ ಮುಂಬೈನಲ್ಲಿ ಇತ್ತೀಚೆಗೆ ಲಂಚ್ ಡೇಟ್ ಮತ್ತು ಡಿನ್ನರ್ ಡೇಟ್ ನಲ್ಲಿ ಕಾಣಿಸಿಕೊಂಡು ಫೋಟೋಗಳು ವೈರಲ್ ಆದ ನಂತರ ಭಾರೀ ಸುದ್ದಿಯಾಗಿದ್ರು. ಈ ಬಗ್ಗೆ ಎಎಪಿ ಸಂಸದ ರಾಘವ್ ಚಡ್ಡಾರನ್ನು ಪ್ರಶ್ನಿಸಿದ್ರೆ ಅವರು ರಾಜಕೀಯದ ಬಗ್ಗೆ ಕೇಳಿ ಪರಿಣಿತಿ ಬಗ್ಗೆಯಲ್ಲ ಎಂದಿದ್ದಾರೆ.

ವದಂತಿಯ ಸಂಬಂಧದ ಬಗ್ಗೆ ಮತ್ತಷ್ಟು ಕೆದಕಿದಾಗ, ರಾಘವ್ ನಾಚಿಕೆಯಿಂದ ಉತ್ತರ ನೀಡುತ್ತೇನೆ ಎಂದಿದ್ದಾರೆ. ಮೂಲಗಳ ಪ್ರಕಾರ, ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಒಟ್ಟಿಗೆ ಓದುತ್ತಿದ್ದರು. ಬಹಳ ಸಮಯದಿಂದ ಸ್ನೇಹಿತರಾಗಿದ್ದರು. ಅವರು ಇನ್ ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಫಾಲೋ ಮಾಡ್ತಿದ್ದಾರೆ.

ಬುಧವಾರ ರಾತ್ರಿ, ಬಾಸ್ಟಿಯನ್ ವರ್ಲಿಯಲ್ಲಿ ಈ ಜೋಡಿಯನ್ನು ಕ್ಲಿಕ್ ಮಾಡಲಾಗಿತ್ತು. ಇಬ್ಬರೂ ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಒಟ್ಟಿಗೆ ಪದೇ ಪದೇ ಕಾಣಿಸಿಕೊಂಡಿದ್ರಿಂದ ಇಬ್ಬರ ನಡುವೆ ಪ್ರೇಮ ಸಂಬಂಧವಿರಬಹುದೆಂದು ಹೇಳಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read