ಶೀಘ್ರದಲ್ಲೇ ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಮದುವೆ; ಗಾಯಕ ಹಾರ್ಡಿ ಸಂಧು ಮಾಹಿತಿ

ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈ ಬಗ್ಗೆ ಗಾಯಕ ಹಾರ್ಡಿ ಸಂಧು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿಗಷ್ಟೇ AAP ಸದಸ್ಯ ಸಂಜೀವ್ ಅರೋರಾ, ಪರಿಣಿತಿ ಮತ್ತು ರಾಘವ್ ಚಡ್ಡಾ ಅವರನ್ನು ಅಭಿನಂದಿಸಿದ್ರು. ಇವರಿಬ್ರೂ ಈಗಾಗ್ಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ಹಾರ್ಡಿ ಸಂಧು ಮಾತು ಮತ್ತಷ್ಟು ಸಾಕ್ಷಿ ನೀಡಿದೆ.

ಅವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದು ತಾನು ಪರಿಣಿತಿ ಚೋಪ್ರಾಗೆ ಕರೆ ಮಾಡಿ ಅಭಿನಂದಿಸಿದೆ ಎಂದು ಹೇಳಿದರು. “ಇದು ಅಂತಿಮವಾಗಿ ಸಂಭವಿಸಿದೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಾನು ಅವಳಿಗೆ ಎಲ್ಲಾ ಅದೃಷ್ಟವನ್ನು ಬಯಸುತ್ತೇನೆ,” ಎಂದು ಗಾಯಕ ಹಾರ್ಡಿ ಸಂಧು ಡಿಎನ್ಎಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಗಾಯಕ ಹಾರ್ಡಿ ಸಂಧು ನಟಿ ಪರಿಣಿತಿಯೊಂದಿಗೆ 2022 ರ ಸ್ಪೈ-ಥ್ರಿಲ್ಲರ್ ಕೋಡ್ ನೇಮ್: ತಿರಂಗ’ದಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಪರಿಣಿತಿ ಚೋಪ್ರಾ ಅವರು ಮದುವೆ ಬಗ್ಗೆ ಚರ್ಚಿಸಿದ್ದರು. ನಾವು ಕೋಡ್ ನೇಮ್: ತಿರಂಗಾ ಚಿತ್ರೀಕರಣದಲ್ಲಿದ್ದಾಗ ಮದುವೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೆವು . ಆಗ ಅವರು ನನಗೆ ಸರಿಯಾದ ವ್ಯಕ್ತಿ ಸಿಕ್ಕಿದ ನಂತರವೇ ನಾನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದುದಾಗಿ ತಿಳಿಸಿದರು.

ಮುಂಬೈನ ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಕಳೆದ ಬುಧವಾರ ರಾತ್ರಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read