ಆಗಸ್ಟ್ 30 ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿರುವ ಕಿರಣ್ ರಾಜ್ ನಟನೆಯ ಬಹು ನಿರೀಕ್ಷಿತ ‘ರಾನಿ’ ಚಿತ್ರದ ಟ್ರೈಲರ್ ಇದೆ ಆಗಸ್ಟ್ 20 ಕ್ಕೆ ಟಿ ಸಿರೀಸ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಗುರುತೇಜ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಸ್ಟಾರ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಸೇರಿದಂತೆ ರವಿಶಂಕರ್, ಬಿ ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಯಶ್ ಶೆಟ್ಟಿ, ಧರ್ಮಣ್ಣ, ಸೂರ್ಯ ಕುಂದಾಪುರ, ಕರಿ ಸುಬ್ಬು, ಮೈಕೋ ನಾಗರಾಜ, ಪೃಥ್ವಿ, ಅರ್ಜುನ್ ಪಾಳೇಗಾರ್, ಸಮೀಕ್ಷಾ, ಅಪೂರ್ವ, ರಾಧ್ಯಾ. ತಾರಾ ಬಳಗದಲ್ಲಿದ್ದಾರೆ.
ಉಮೇಶ್ ಆರ್ ಬಿ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/PichharKannada/status/1825070392618385695