ವೋಟ್ ಚೋರಿ ಡೈಲಾಗ್ ಜನ ನಂಬಲ್ಲ: ರಾಹುಲ್ ಗಾಂಧಿಗೆ ರಾಹು ಕಾಲ ಶುರುವಾಗಿದೆ; ಇನ್ಮುಂದೆ ಸಿದ್ದರಾಮಯ್ಯ ಹೇಳಿದಂತೆ ಅವರು ಕೇಳಬೇಕು: ಆರ್.ಅಶೋಕ್ ಲೇವಡಿ

ಬೆಂಗಳೂರು: ವೋಟ್ ಚೋರಿ ಕಾಂಗ್ರೆಸ್ ನವರ ಬ್ರ್ಯಾಂಡ್ ಆಗಿತ್ತು. ಈಗ ಈ ಡೈಲಾಗ್ ನ್ನು ಜನರು ನಂಬಲ್ಲ. ರಾಹುಲ್ ಗಾಂಧಿಗೆ ರಾಅಹು ಕಾಲ ಶುರುವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ವೋಟ್ ಚೋರಿ ಎಂಬ ಕಾಂಗ್ರೆಸ್ ಬ್ರ್ಯಾಂಡ್ ಈಗ ಫೇಲ್ ಆಗಿದೆ. ವೋಟ್ ಚೋರಿ ಎಂಬುದು ಬೋಗಸ್ ಎಂದು ಬಿಹಾರದ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ವೋಟ್ ಚೋರಿ ಎಂಬ ಕಾಂಗ್ರೆಸ್ ಡೈಲಾಗ್ ನ್ನು ಜನ ನಂಬುವುದಿಲ್ಲ. ರಾಹುಲ್ ಗಾಂಧಿಗೆ ರಾಹು ಕಾಲ ಶುರುವಾಗಿದೆ. ಇನ್ಮುಂದೆ ಅವರು ಸಿದ್ದರಾಮಯ್ಯ ಹೇಳಿದಂಯೆ ಕೇಳಬೇಕು ಎಂದು ಲೇವಡಿ ಮಾಡಿದರು.

ಬಿಹಾರ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಹೈಕಮಾಂಡ್ ಮಂಕಾಗಿದೆ. ಆದರೆ ಇತ್ತ ಬಿಹಾರ ಫಲಿತಾಂಶದಿಂದ ಸಿದ್ದರಾಮಯ್ಯನವರು ಸ್ಟ್ರಾಂಗ್ ಆಗಿದ್ದಾರೆ. ಇಷ್ಟು ದಿನ ರಾಹುಲ್ ಗಾಂಧಿ ಮಾತನ್ನು ಸಿದ್ದರಾಮಯ್ಯ ಕೇಳುತ್ತಿದ್ದರು. ಈಗ ಸಿದ್ದರಾಮಯ್ಯನವರ ಮಾತನ್ನು ರಾಹುಲ್ ಗಾಂಧಿ ಕೇಳಬೇಕು. ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಹಾವಾಡಿಗರ ರೀತಿ ಆಡಿಸ್ತಾರೆ. ಬಿಹಾರ ಫಲಿತಾಂಶ ಕಾಂಗ್ರೆಸ್ ಹೈಕಮಾಂಡ್ ಗೆ ಶಾಕ್ ಕೊಟ್ಟಿದೆ. ರಾಹುಲ್ ಗಾಂಧಿಗೆ ರಾಹು ಕಾಲ ಶುರುವಾಗಿದೆ. ಸಿದ್ದರಾಮಯ್ಯನವರಿಗೆ ಶುಕ್ರದೆಸೆ ಶುರುವಾಗಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read