ಬೆಂಗಳೂರು: ಕೌಟುಂಬಿಕ ಕಲಹದ ಕಾರಣದಿಂದ ಪತ್ನಿಯ ಜಗಳದಿಂದ ಗುತ್ತಿಗೆದಾರನೊಬ್ಬನ ಪರಸ್ತ್ರೀ ಸಂಗದ ರಾಸಲೀಲೆ ವಿಡಿಯೋ ಬಹಿರಂಗವಾಗಿದೆ. ಬೆಂಗಳೂರಿನ ಇಂದಿರಾ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಎಂ ಕಾವಲು ನಿವಾಸಿ ನಾರಾಯಣ್ ವಿವಾದಕ್ಕೆ ಸಿಲುಕಿದ್ದಾರೆ. ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ನಾರಾಯಣ್ ವಿರುದ್ಧ ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ನಾರಾಯಣ್ ಸ್ಥಳಿಯವಾಗಿ ಸಣ್ಣಪುಟ್ಟ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾರಾಯಣ್ ದಂಪತಿ ಮಧ್ಯೆ ಮನಸ್ತಾಪವಾಗಿ ಎರಡು ವರ್ಷಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಮಹಿಳಾ ಠಾಣೆ ಪೋಲೀಸರು ಕೌನ್ಸೆಲಿಂಗ್ ಮಾಡಿ ಸಂಧಾನ ನಡೆಸಿದ್ದರು. ನಂತರ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಇತ್ತೀಚೆಗೆ ಮತ್ತೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ನಾರಾಯಣ್ ಅವರ ಪರಸ್ತ್ರೀ ಸಂಗದ ವಿಡಿಯೋಗಳು ಬಹಿರಂಗವಾಗಿ ಮುಜುಗರಕ್ಕೀಡಾಗಿದ್ದು, ಈ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ಕೌಟುಂಬಿಕ ಕಲಹ ವಿಚಾರವಾಗಿ ಗಲಾಟೆ ಸಂಬಂಧ ಪ್ರಕರಣ ದಾಖಲಾಗಿದೆ.