ಹೆಬ್ಬಾವುಗಳನ್ನು ಸಲೀಸಾಗಿ ಹಿಡಿದು ಚೀಲಕ್ಕೆ ತುಂಬಿದ ಯುವತಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಮ್ಯಾನ್ಮಾರ್​: ಇಲ್ಲಿಯ ಯಾಂಗೋನ್ ಮಠದಲ್ಲಿ ಅಕ್ಕಿ ಚೀಲಗಳಲ್ಲಿ ಬೀಡುಬಿಟ್ಟಿದ್ದ ನಾಲ್ಕು ಹೆಬ್ಬಾವುಗಳನ್ನು ಶ್ವೇ ಲೀ ಎಂಬ ಹಾವು ರಕ್ಷಕಿ ಕಾಪಾಡಿದ್ದಾರೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದೆ.

ಆದರೆ ಯಾವುದೇ ಅಳುಕು ಇಲ್ಲದೆಯೇ ಶ್ವೇ ಲೀ ಅದನ್ನು ಹಿಡಿದು ಬುಟ್ಟಿಯಲ್ಲಿ ತುಂಬಿದ್ದಾರೆ. “ನಾನು ಹಾವುಗಳನ್ನು ಪ್ರೀತಿಸುತ್ತೇನೆ. ಏಕೆಂದರೆ ಅವು ಮೋಸಗಾರರಲ್ಲ ಎಂದಿದ್ದಾರೆ ಶ್ವೇ ಲೀ.

2016 ರಲ್ಲಿ ಹಾವುಗಳನ್ನು ಹಿಡಿಯಲು ಪ್ರಾರಂಭಿಸಿದ ನಂತರ ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಶ್ವೇ ಲೀ, ಆದರೂ ಹಾವುಗಳೆಂದರೆ ತುಂಬಾ ಪ್ರೀತಿ ಇಟ್ಟುಕೊಂಡಿರುವ ಆಕೆ, ಹಾವು ಹಿಡಿಯುವ ಆಟದಲ್ಲಿ ವೇಗವಾಗಿ ಮತ್ತು ಚುರುಕಾಗಿ ಇರಬೇಕು ಎನ್ನುತ್ತಾರೆ.

ನಾವು ಎಲ್ಲೆಲ್ಲಿ ವಿಷಪೂರಿತ ಹಾವನ್ನು ಹಿಡಿಯುತ್ತೇವೆಯೋ, ಬಹಳ ಸಮಯದಲ್ಲಿ ಅವು ಕಚ್ಚುವ ಸಂಭವ ಇರುತ್ತದೆ. ಆದರೂ ಅದನ್ನು ಸೂಕ್ಷ್ಮವಾಗಿ ಅದಕ್ಕೆ ಪೆಟ್ಟಾಗದಂತೆ ಹಿಡಿಯುವುದೇ ಜಾಣ್ಮೆ ಎನ್ನುತ್ತಾರೆ. ಅಂದಹಾಗೆ ಈಕೆಯನ್ನು ಹಾವಿನ ರಾಣಿ ಎಂದೂ ಕರೆಯಲಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read