ಅನ್ಯ ಪುರುಷನ ವರಿಸುತ್ತಿದ್ದ ಪ್ರೇಯಸಿಯ ಮದುವೆ ನಿಲ್ಲಿಸಲು ಸಾವಿನ ನಾಟಕವಾಡಿದ ವ್ಯಕ್ತಿ ಅರೆಸ್ಟ್

ತನ್ನ ಗರ್ಲ್‌ಫ್ರೆಂಡ್ ಮದುವೆ ತಪ್ಪಿಸಲು ಆಕೆಯ ಮಾಜಿ ಪ್ರಿಯತಮ ತನ್ನದೇ ಕಿಡ್ನಾಪ್ ಹಾಗೂ ಕೊಲೆಯ ನಾಟಕ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜರುಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಕೈ-ಕಾಲುಗಳು ಹಗ್ಗಕ್ಕೆ ಕಟ್ಟಲ್ಪಟ್ಟಿದ್ದು, ಮುಖದಲ್ಲಿ ರಕ್ತ ತುಂಬಿ, ಬಾಯಿಂದ ನಾಲಿಗೆ ಆಚೆ ಬಂದಿರುವ ವ್ಯಕ್ತಿಯನ್ನು ವಿಡಿಯೋದಲ್ಲಿ ನೋಡಬಹುದು.

ವಾಸಿಂ ಹೆಸರಿನ ಈತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಶಾಬಾಜ಼್‌ಪುರ ಕಾಲಾ ಎಂಬ ಗ್ರಾಮದ ವಾಸಿಂ ತನ್ನದೇ ಊರಿನ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅದು ಎರಡೂ ಕುಟುಂಬಗಳಿಗೆ ತಿಳಿದಿತ್ತು. ಜಾತಿಗಳು ಬೇರೆಯಾಗಿದ್ದ ಕಾರಣ ಹುಡುಗಿಯ ಹೆತ್ತವರು ಆಕೆಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಏಪ್ರಿಲ್ 24ರಂದು ಮದುವೆ ಇತ್ತು.

ಈ ಮದುವೆಯನ್ನು ನಿಲ್ಲಿಸಲು ಪ್ಲಾನ್ ಮಾಡಿದ ವಾಸಿಂ, ತನ್ನದೇ ಅಪಹರಣ ಹಾಗೂ ಕೊಲೆಯ ನಾಟಕವಾಡಿ, ಹುಡುಗಿಯ ಕುಟುಂಬಸ್ಥರನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾನೆ. ಏಪ್ರಿಲ್ 23ರಂದು ಈ ಸಂಬಂಧ ವಿಡಿಯೋ ಮಾಡಿದ ವಾಸಿಂ ಅದನ್ನು ತನ್ನ ಸಹೋದರನಿಗೆ ಕಳುಹಿಸಿದ್ದಾನೆ.

ಕೂಡಲೇ ವಾಸಿಂ ಕುಟುಂಬಸ್ಥರು ಹತ್ತಿರದ ಅಸ್ಮೋಲಿ ಪೊಲೀಸ್ ಠಾಣೆಗೆ ಧಾವಿಸಿದ್ದು, ವಾಸಿಂನನ್ನು ಹುಡುಗಿಯ ಕುಟುಂಬಸ್ಥರು ಕೊಂದಿದ್ದಾರೆ ಎಂದು ಆಪಾದಿಸಿ, ವಿಡಿಯೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಾಸಿಂ ಶವವನ್ನು ಪತ್ತೆ ಮಾಡಲು ಮುಂದಾದ ಪೊಲೀಸರು ಏಪ್ರಿಲ್ 23ರ ರಾತ್ರಿ ಹಾಗೂ 24ರ ಬೆಳಿಗ್ಗೆ ತಮ್ಮ ಶೋಧ ಮುಂದುವರೆಸಿದ್ದಲ್ಲದೇ, ಆತನ ಸ್ನೇಹಿತರನ್ನು ಕಸ್ಟಡಿಗೆ ಪಡೆದು ವಿಚಾರಣೆ ಕೂಡ ನಡೆಸಿದ್ದಾರೆ.

ಆ ವೇಳೆ ತನ್ನ ಸಹೋದರಿ ಮನೆಯಲ್ಲಿ ಅವಿತುಕೊಂಡಿದ್ದ ವಾಸಿಂ. ತನ್ನ ಸಹೋದರ ಕೊಲೆಯಾಗಿದ್ದಾನೆ ಎಂದು ತಿಳಿಸಲು ಕುಟುಂಬಸ್ಥರು ಕರೆ ಮಾಡಿದ ವೇಳೆ ಅವರಿಗೆ ವಾಸಿಂ ತನ್ನ ಮನೆಯಲ್ಲಿರುವುದಾಗಿ ಆಕೆ ತಿಳಿಸಿದ್ದಾರೆ. ಕೂಡಲೇ ವಾಸಿಂನನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ ಮಾಡಿದ ವಾಸಿಂ ಸ್ನೇಹಿತ ಅನಾಸ್‌ನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read