38 ಜನರ ಸಾವಿಗೆ ಕಾರಣವಾದ ವಿಮಾನ ಪತನ: ಕ್ಷಮೆಯಾಚಿಸುವ ಮೂಲಕ ಪರೋಕ್ಷವಾಗಿ ರಷ್ಯಾ ಸೇನೆ ಕೃತ್ಯ ಒಪ್ಪಿಕೊಂಡ ಪುಟಿನ್

ಮಾಸ್ಕೋ: ಕಜಕಸ್ಥಾನದಲ್ಲಿ 38 ಜನರ ಸಾವಿಗೆ ಕಾರಣವಾದ ವಿಮಾನ ಪತನ ಘಟನೆಯನ್ನು ದುರಂತ ಎಂದು ಬಣ್ಣಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಬಗ್ಗೆ ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆಯಾಚಿಸಿದ್ದಾರೆ.

ಇದರೊಂದಿಗೆ ಅಜರ್ ಬೈಜಾನ್ ಗೆ ಸೇರಿದ ವಿಮಾನವನ್ನು ರಷ್ಯಾ ಸೇನೆಯೇ ಹೊಡೆದುರುಳಿಸಿದೆ ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ಅಜರ್ ಬೈಜಾನ್ ಅಧ್ಯಕ್ಷ ಇಲ್ಯಾಮ್ ಅಲಿಯೆವ್ ಅವರಿಗೆ ಕರೆ ಮಾಡಿದ ಪುಟಿನ್ ಈ ಬಗ್ಗೆ ಮಾತನಾಡಿದ್ದಾರೆ. ರಷ್ಯಾ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ ಎಂದು ನೇರವಾಗಿ ಪುಟಿನ್ ಹೇಳಿಲ್ಲವಾದರೂ ಅವರು ಕ್ಷಮೆಯಾಚಿಸಿದ ಪರಿ ಮತ್ತು ರಷ್ಯಾ ಸರ್ಕಾರದ ಅಧಿಕೃತ ಹೇಳಿಕೆಯಿಂದ ಈ ವಿಷಯ ಸ್ಪಷ್ಟವಾಗಿದೆ.

ದುರಂತಕ್ಕೀಡಾದ ವಿಮಾನ ಗ್ರೋಝ್ನಿ ಪ್ರಾಂತ್ಯದ ಸಮೀಪ ಲ್ಯಾಂಡಿಂಗ್ ನಡೆಸಲು ಮುಂದಾಗಿತ್ತು. ಇದೇ ವೇಳೆ ಉಕ್ರೇನ್ ಡ್ರೋನ್ ಗಳ ವಿರುದ್ಧ ರಷ್ಯಾ ವಾಯು ಸೇನೆ ನಿರಂತರವಾಗಿ ದಾಳಿ ನಡೆಸುತ್ತಿತ್ತು ಎಂದು ರಷ್ಯಾ ಸರ್ಕಾರದ ಪ್ರಕಟಣೆ ತಿಳಿಸಿದೆ. ಆದರೆ ಈ ದಾಳಿಯಿಂದಲೇ ವಿಮಾನ ಪತನವಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read