ಆಳಂದ ಮತ ಡಿಲಿಟ್ ಮಾಡಲು 10 ರೂ.ಗೆ ಒಟಿಪಿ ಖರೀದಿ: ಪಶ್ಚಿಮ ಬಂಗಾಳದಲ್ಲಿ ಒಟಿಪಿ ವ್ಯಾಪಾರಿ ಅರೆಸ್ಟ್

ಬೆಂಗಳೂರು: ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಮುಂದುವರೆದಿದ್ದು, ಮತಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಕುಗ್ರಾಮದಲ್ಲಿ ಕುಳಿತು 10 ರೂಪಾಯಿಗೆ ಒಂದು ಒಟಿಪಿ ಮಾರುತ್ತಿದ್ದ ಕಿಡಿಗೇಡಿಯನ್ನು ಎಸ್ಐಟಿ ಬಂಧಿಸಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬಾಪಿ ಆದ್ಯಾ ಬಂಧಿತ ಆರೋಪಿ. ಈತನಿಂದ ಎರಡು ಲ್ಯಾಪ್ಟಾಪ್ ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಕೆಲವರನ್ನು ವಶಕ್ಕೆ ಪಡೆದ ಎಸ್ಐಟಿ ವಿಚಾರಣೆ ನಡೆಸಿದ್ದು, ಬಂಧಿತ ಬಾಪಿ ಆದ್ಯಾ ಕೆಲವು ವೆಬ್ಸೈಟ್ ಗಳನ್ನು ನಡೆಸುತ್ತಿದ್ದ. ಆಳಂದ ಮತಗಳ್ಳರಿಗೆ ಒಟಿಪಿ ಮಾರಾಟ ಮಾಡಿದ್ದ. ಒಟಿಪಿ ಬೇಕು ಎನ್ನುವವರು ಹಣಕೊಟ್ಟರೆ ಆತನೇ ಎರಡು ಮೊಬೈಲ್ ಸಂಖ್ಯೆಗಳನ್ನು ಕೊಡುತ್ತಿದ್ದ. ಆ ಸಂಖ್ಯೆಗಳನ್ನು ಬಳಸಿ ತನ್ನ ವೆಬ್ಸೈಟ್ ಮೂಲಕ ಒಟಿಪಿ ಮಾರಾಟ ಮಾಡುತ್ತಿದ್ದ. ಈತನಿಗೆ ಆಳಂದ ನಂಟು ಇರುವದರಿಂದ ಹಣ ವರ್ಗಾವಣೆಯಾಗಿದ್ದು, ಅದರ ಆಧಾರದ ಮೇಲೆ ಒಟಿಪಿ ವ್ಯಾಪಾರಿಯನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read