ಪಂಜಾಬ್: ತಂದೆಯೊಬ್ಬರು ತಮ್ಮ ಮಗುವನ್ನು ಬೈಕ್ ನಲ್ಲಿ ಶಾಲೆಗೆ ಕರೆದೊಯ್ಯುತ್ತಿರುವಾಗ ಅಡ್ಡಗಟ್ಟಿದ ಆರು ಜನರ ಗುಂಪು ಹಾಡಹಗಲಿನಲ್ಲೇ ಕ್ರೂರವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪಂಜಾಬ್ ನ ಮಾನ್ಸಾದಲ್ಲಿ ಈ ಘಟನೆ ನಡೆದಿದೆ.
ಕ್ಯಾಮರಾದಲ್ಲಿ ಈ ಘಟನೆ ಸೆರೆಯಾಗಿದೆ. ಶಾಲೆಯ ಕಡೆಗೆ ತಂದೆ-ಮಗ ಇಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಏಕಾಏಕಿ ಬೈಕ್ ಅನ್ನು ಗೂಂಡಾಗಳು ಅಡ್ಡಗಟ್ಟಿದ್ದಾರೆ. ಮಗುವನ್ನು ಬೈಕ್ ನಿಂದ ಕೆಳಗಿಳಿಸಿ, ದೊಣ್ಣೆಯಿಂದ ಮಗುವಿನ ತಂದೆಗೆ ಮನಬಂದಂತೆ ಥಳಿಸಿದ್ದಾರೆ. ಮಗು ತನ್ನ ತಂದೆಗೆ ಥಳಿಸುತ್ತಿರುವುದನ್ನು ನೋಡಿ ಅಸಹಾಯಕನಾಗಿ ಅಳುತ್ತಾ ನಿಂತಿರುವುದು ಎಂಥ ಕಲ್ಲು ಹೃದಯದವರನ್ನು ಸಹ ಕರಗಿಸುಂತೆ ಮಾಡಿದೆ.
ಇನ್ನು ವಿಷಯ ತಿಳಿದ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಭಯ ವ್ಯಕ್ತಿಗಳ ನಡುವಿನ ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.
ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿಯೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕೆಲವು ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಬಿಟ್ಟು ಒಳಗೆ ಕಳುಹಿಸುತ್ತಿರುವ ದೃಶ್ಯಗಳು ಗೋಚರಿಸಿವೆ. ತಂದೆಯು ತನ್ನ ಮಗನನ್ನು ಇಳಿಸಲು ಬೈಕ್ ಅನ್ನು ನಿಲ್ಲಿಸಿದ ತಕ್ಷಣವೇ, ಏಕಾಏಕಿ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.
https://twitter.com/Gagan4344/status/1689558174393892864?ref_src=twsrc%5Etfw%7Ctwcamp%5Etweetembed%7Ctwterm%5E1689551409501638656%7Ctwgr%5Ed263a2cf30b250900bdf104fc41fec202665a738%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fpunjab-news-6-bike-borne-men-thrash-father-with-sticks-in-front-of-son-near-mansa-school-chilling-visuals-surface