ಕಾಮದ ಮದದಲ್ಲಿ ಟೆಕ್ಕಿಯಿಂದ ನಾಚಿಕೆಗೇಡು ಕೃತ್ಯ: ವಿಮಾನದಲ್ಲೇ ಹಸ್ತಮೈಥುನ

ನವದೆಹಲಿ: ಪುಣೆ-ನಾಗ್ಪುರ ವಿಮಾನದಲ್ಲಿ ಹಸ್ತಮೈಥುನ ಮತ್ತು ಮಹಿಳಾ ಸಹ-ಪ್ರಯಾಣಿಕರ ಪಕ್ಕದಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡಿದ ಆರೋಪದ ಮೇಲೆ ಪುಣೆ ಮೂಲದ ಇಂಜಿನಿಯರ್ ಅನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಯನ್ನು 32 ವರ್ಷದ ಫಿರೋಜ್ ಶೇಖ್ ನೂರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಫಿರೋಜ್ ಆಕೆಗೆ ಅಶ್ಲೀಲ ಸನ್ನೆ ಮಾಡಿದ್ದು, ನಂತರ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಪುಣೆಯ ಕೊಂಧ್ವಾದ ಮಿಥಾನಗರ ಪ್ರದೇಶದ ದುರಾನಿ ಕಾಂಪ್ಲೆಕ್ಸ್‌ನ ನಿವಾಸಿ ಫಿರೋಜ್ ಶೇಖ್, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಕೆಲಸದ ನಿಮಿತ್ತ ನಾಗ್ಪುರ ಸಮೀಪದ ಕೊರಾಡಿ ಎಂಬಲ್ಲಿನ ಕೈಗಾರಿಕಾ ಜಲ ಘಟಕಕ್ಕೆ ತೆರಳುತ್ತಿದ್ದರು. ವಿಪರ್ಯಾಸವೆಂದರೆ ಆರೋಪಿ ಮುಂದಿನ ತಿಂಗಳು ವಿವಾಹವಾಗಲಿದ್ದಾನೆ.

ಫಿರೋಜ್ ಶೇಖ್ ಅವರು 40 ವರ್ಷದ ಮಹಿಳಾ ಶಿಕ್ಷಕಿಗೆ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ. ನಂತರ ಅವರ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾರೆ. ಸಂತ್ರಸ್ತೆ ಸೋಮವಾರ ತಡರಾತ್ರಿ ಚಂದ್ರಾಪುರದಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ಟೇಕ್ ಆಫ್ ಆದ ನಂತರ ಮಹಿಳೆ ನಿದ್ರೆಗೆ ಜಾರಿದಳು, ಆರೋಪಿ ಈ ಸಂದರ್ಭದ ಲಾಭ ಪಡೆದು ಆಕೆಗೆ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆಗೆ ಎಚ್ಚರವಾಗಿದೆ. ಫಿರೋಜ್ ಶೇಖ್ ಅವಳನ್ನು ಸ್ಪರ್ಶಿಸುವಾಗ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವಾಗ ತನ್ನ ಖಾಸಗಿ ಅಂಗ ಬಹಿರಂಗಪಡಿಸುವುದನ್ನು ನೋಡಿದಳು.

ವಿಮಾನ ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಶೇಖ್ ಪರಾರಿಯಾಗಲು ಪ್ರಯತ್ನಿಸಿದ. ಆದರೆ ಮಹಿಳೆ ಸಿಐಎಸ್ಎಫ್, ವಿಮಾನ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು, ಅವರು ತಪ್ಪಿಸಿಕೊಳ್ಳದಂತೆ ತಡೆದು ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶೇಖ್ ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read