ಅಪ್ರಾಪ್ತೆಯನ್ನ ಬಲವಂತವಾಗಿ ಚುಂಬಿಸಿದ ಯುವಕ: ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ

ಮಹಿಳೆಯರಿಗೆ ಲೈಂಗಿಕ ಕಿರುಕುಳ, ಯುವತಿಯರಿಗೆ ಮಾನಸಿಕ ಚಿತ್ರಹಿಂಸೆ ಅಷ್ಟೆಅಲ್ಲ ಅಪ್ರಾಪ್ತೆಯರ ಮೇಲೆ ಅತ್ಯಾಚಾರ. ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಅನ್ನೋದಕ್ಕೆ ಈ ಸುದ್ದಿಗಳು ಸಾಕ್ಷಿಯಾಗಿವೆ.

ಈಗ ಇದೇ ಸುದ್ದಿಗಳ ಪಟ್ಟಿಗೆ ಪುಂಡನೊಬ್ಬ ಅಪ್ರಾಪ್ತೆಗೆ ಒತ್ತಾಯದಿಂದ ತುಟಿಯನ್ನ ಚುಂಬಿಸಿ ಹೋಗಿರುವ ಘಟನೆ ಸೇರಿದೆ. ಅಷ್ಟಕ್ಕೂ ಈ ಘಟನೆ ಪುಣೆಯಲ್ಲಿ ನಡೆದಿದೆ.

ಫೆಬ್ರವರಿ 28ರಂದು ಬಾಲಕಿ ಎಂದಿನಂತೆ ಬಸ್‌ಗಾಗಿ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಅದೇ ಸಮಯದಲ್ಲಿ ನಯಾಗಾಂವ್‌ನ ಶುಭಂ ಗಂಗಾಧರ್ ಶೆಡಗೆ ಅನ್ನೊ 22 ವರ್ಷದ ಯುವಕ ಅಲ್ಲಿಗೆ ಬರುತ್ತಾನೆ. ಆ ಬಸ್‌ನಿಲ್ದಾಣದಲ್ಲಿ ಜನಜಂಗುಳಿ ಕಡಿಮೆ ಇದ್ದಿದ್ದನ್ನ ಗಮನಿಸಿ, ಆತ ನೇರವಾಗಿ ಹೋಗಿ ಆ ಬಾಲಕಿಯ ತುಟಿಯನ್ನ ಗಟ್ಟಿಯಾಗಿ ಚುಂಬಿಸಿದ್ದಾನೆ.

ಆ ಸಮಯದಲ್ಲಿ ಗಾಬರಿಗೊಂಡ ಆಕೆ ಬಿಡಿಸಿಕೊಳ್ಳಲು ಎಷ್ಟು ನೋಡಿದರೂ ಆತ ಬಿಟ್ಟಿರಲಿಲ್ಲ. ಕೆಲ ಹೊತ್ತಿನ ನಂತರ ಯುವಕ ಆ ಅಪ್ರಾಪ್ತೆಯನ್ನ ಮದುವೆ ಆಗು ಅಂತ ಹೇಳಿದ್ದಾನೆ. ಆಕೆ ಒಪ್ಪದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನ ಹಾಕಿದ್ದಾನೆ.

ಈಗ ಈ ಪ್ರಕರಣ ಪುಣೆಯ ಭಾರತೀ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಷ್ಟೆ ಅಲ್ಲ ಯುವಕನ ವಿರುದ್ಧ ಕೇಸ್ ಕೂಡಾ ದಾಖಲು ಮಾಡಿ, ಈಗ ಪೊಲೀಸ್ ಸ್ಟೇಷನ್‌ನಲ್ಲೇ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ.

ಕೇವಲ ಪುಣೆಯಲ್ಲಿ ಮಾತ್ರ ಅಲ್ಲ, ಛತ್ತಿಸ್‌ಗಢ್‌ನ ರಾಯಪುರದಲ್ಲಿಯೂ ಅಪ್ರಾಪ್ತೆಯೊಬ್ಬಳು ತನ್ನ ಪ್ರೀತಿಯನ್ನ ಒಪ್ಪಿಲ್ಲ ಎಂದು ಹುಚ್ಚ ಪ್ರೇಮಿಯೊಬ್ಬ ಆಕೆಯನ್ನ ಚಾಕುವಿನಿಂದ ಇರಿದು ಕೊಂದು, ಆಕೆಯ ದೇಹವನ್ನ ರಸ್ತೆಗೆ ಎಳೆದು ಬಂದು ಬಿಸಾಕಿದ್ದ ಘಟನೆ ನಡೆದಿತ್ತು.

ಇನ್ನೂ ಇದೇ ಮಾರ್ಚ್ 10ರಂದು ಬಿಹಾರ್‌ನ ಜಮುಯಿ ಜಿಲ್ಲೆಯಲ್ಲಿ ಅಪರಾಧಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಹಿಂದಿನಿಂದ ಹೋಗಿ ಕಾಮುಕನೊಬ್ಬ ಆಕೆಯನ್ನ ಬಲವಂತವಾಗಿ ಚುಂಬಿಸಿದ್ದ.

ಸಿಸಿ ಟಿವಿಯಲ್ಲಿ ರೆಕಾರ್ಡ್ ಆದ ಆ ದೃಶ್ಯ ಸಮಾಜದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಅನ್ನೊದಕ್ಕೆ ಸಾಕ್ಷಿಯಾಗಿತ್ತು. ಸದ್ಯಕ್ಕೆ ಈ ಪ್ರಕರಣ ಸ್ಥಳೀಯ ಜಮುಯಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read