ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವದಂತಿಯೊಂದು ಹಬ್ಬಿದ್ದು, ಆತ ಮಂಗಳಮುಖಿಯೊಂದಿಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಬಂಟ್ವಾಳ ತಾಲೂಕಿನ ಸಜಿಪ ಎಂಬ ಮಂಗಳಮುಖಿಯೊಂದೊಗೆ ಆತ ಹೋಗಿದ್ದಾನೆ ಎಂದು ಸ್ನೇಹಿತರ ಮೂಲಕ ಗೊತ್ತಾಯಿತು ಎಂದು ದಿಗಂತ್ ಸಹೋದರ ಪವನ್ ತಿಳಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಬಗ್ಗೆ ಸುದ್ದಿ ಹರಡುತ್ತಿದೆ. ಈ ಬಗ್ಗೆ ವಿಶೇಷ ತನಿಖಾ ತಂಡದ ಜೊತೆಯೂ ಮಾತನಾಡಿದ್ದೇನೆ. ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಇದು ಸುಳ್ಳು ಸುದ್ದಿಯಾಗಿರಬಹುದು. ಜನ ಆ ರೀತಿ ಮಾತನಾಡುತ್ತಿದ್ದಾರೆ. ಆದರೆ ಈವರೆಗೂ ಆತನ ವರ್ತನೆಯಲ್ಲಿ ಅಂತಹ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸ್ನೇಹಿತರ ಜೊತೆ ಇರುತ್ತಿದ್ದ. ತಡರಾತ್ರಿವರೆಗೂ ಗೇಮ್ ಆಡುತ್ತಿದ್ದ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ ಎಂದಿದ್ದಾರೆ.