ದ್ವಿತೀಯ ಪಿಯುಸಿ ಫಲಿತಾಂಶ ನೋಡಿ ಅವಳಿ ಮಕ್ಕಳಿಗೆ ಅಚ್ಚರಿ: ಇಬ್ಬರಿಗೂ ಸೇಮ್ ಮಾರ್ಕ್ಸ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಜಯನಗರದ ವಿಜಯ ಕಾಲೇಜಿನ ಅವಳಿ ಮಕ್ಕಳು ಒಂದೇ ಸಮನಾದ ಅಂಕ ಪಡೆದುಕೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆ ದೇವರ ಚಿಕ್ಕನಹಳ್ಳಿಯ ನಂಜುಂಡಸ್ವಾಮಿ, ನಾಗರತ್ನ ದಂಪತಿ ಪುತ್ರರಾಗಿರುವ ಸಂತೋಷ್ ಮತ್ತು ಸರ್ವೇಶ್ ಅವರು 9 ನಿಮಿಷಗಳ ಅಂತರದಲ್ಲಿ ಜನಿಸಿದ ಅವಳಿ ಮಕ್ಕಳಾಗಿದ್ದಾರೆ. ಇಬ್ಬರೂ ವಾಣಿಜ್ಯ ವಿಭಾಗದಲ್ಲಿ ಶೇಕಡ 94.3 ಅಂಕ ಪಡೆದುಕೊಂಡಿದ್ದಾರೆ. ಅವಳಿ ಮಕ್ಕಳಿಗೆ ಸಮ ಅಂಕಗಳು ಬಂದಿರುವುದು ವಿಶೇಷವಾಗಿದೆ.

ಸಮನಾದ ಅಂಕಗಳು ಬಂದಿರುವುದನ್ನು ನೋಡಿ ನಮಗೂ ಅಚ್ಚರಿಯಾಗಿದೆ. ಹಿಂದೆ ಯಾವುದೇ ಪರೀಕ್ಷೆಯಲ್ಲಿ ಸಮನಾದ ಅಂಕ ಬಂದಿರಲಿಲ್ಲ. ವ್ಯವಹಾರ ಅಧ್ಯಯನ ಮತ್ತು ಲೆಕ್ಕವಿಜ್ಞಾನದಲ್ಲಿ ಇಬ್ಬರೂ 100 ಅಂಕ ಪಡೆದುಕೊಂಡಿದ್ದು, ಉಳಿದ ವಿಷಯಗಳಲ್ಲಿ ಬೇರೆ ಆಗಿವೆ. ಇಬ್ಬರೂ ಒಟ್ಟಿಗೆ ಓದುತ್ತಿದ್ದರು. ಒಂದೇ ರೀತಿ ಬಟ್ಟೆ ಧರಿಸುತ್ತಿದ್ದರು. ಇಬ್ಬರ ಅಭಿರುಚಿ ಕೂಡ ಒಂದೇ ಆಗಿದ್ದು, ಈಗ ಅಂಕಗಳು ಕೂಡ ಸಮನಾಗಿ ಬಂದಿರುವುದು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read