PSI ಮನೆಯಲ್ಲಿ ದರೋಡೆ: FIR ದಾಖಲು

ಬೆಂಗಳೂರು: ಪಿಎಸ್ಐ ಪುಟ್ಟಸ್ವಾಮಿ ನಿವಾಸದಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್ಐ ಪುಟ್ಟಸ್ವಾಮಿ ಮನೆಯಲ್ಲಿ ದರೋಡೆ ನಡೆದಿತ್ತು. ಕೋರಮಂಗಲ ಠಾಣೆಯ ಹಿಂಭಾಗದಲ್ಲಿರುವ ಪುಟ್ಟಸ್ವಾಮಿ ಮನೆಗೆ ನುಗ್ಗಿದ ಕಳ್ಳರು, ಪುಟ್ಟಸ್ವಾಮಿ ಅವರ ಪತ್ನಿಯ ಕೈ, ಕಾಲು ಕಟ್ಟಿಹಾಕಿ ಮನೆಯಲ್ಲಿದ್ದ 12 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದರು.

25 ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಇದೀಗ ಎಫ್ಐಆರ್ ದಾಖಲಾಗಿದೆ. ಇನ್ನೊಂದೆಡೆ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿಯೇ ಕಳ್ಳತನವಾಗಿದ್ದರೂ ತನಿಖೆ ಪ್ರಾಥಮಿಕ ಹಂತದಲ್ಲೇ ಇದ್ದು, ಕಳುವಾಗಿದ್ದು 12 ಲಕ್ಷ ರೂ.ಮಾತ್ರವೇ ಅಥವಾ ಅದಕ್ಕಿಂತ ಹೆಚ್ಚಿನ ಹಣ ಕಳುವಾಗಿದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read