ಬೆಂಗಳೂರು : ರಾಜ್ಯದಲ್ಲಿ ‘ಜಾತಿ ಗಣತಿ’ಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಗಣತಿದಾರರು ಕಳೆದ ಮೂರು ದಿನದಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ.
ಬೀದರ್ ನಲ್ಲಿ ಶಿಕ್ಷಕರು ನೆಟ್ ವರ್ಕ್ ಸಿಗದೇ ಪರದಾಡಿದ್ದು, ಮರ ಏರಿದ ಘಟನೆ ನಡೆದಿದೆ. ಹಳ್ಳಿಗಳಿಗೆ ಬಂದ ಶಿಕ್ಷಕರಿಗೆ ನೆಟ್ ವರ್ಕ್ ಕೈ ಕೊಟ್ಟಿದ್ದು, ನೆಟ್ ವರ್ಕ್ ಗಾಗಿ ಮರ ಏರುವ ಪರಿಸ್ಥಿತಿ ಬಂದಿದೆ. ಬೀದರ್ ಜಿಲ್ಲೆಯ ಕಮಲಹನರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಉಂಟಾಗಿದ್ದು, ಶಿಕ್ಷಕರು ಮರ, ನೀರಿನ ಟ್ಯಾಂಕ್ ಏರಿದ್ದಾರೆ.
ಗಣತಿದಾರರು ಆರಂಭದಿಂದ ಕಿಟ್ ಸಂಗ್ರಹಿಸುವುದು, ಬ್ಲಾಕ್ ಪತ್ತೆ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸುವುದು, ಆಪ್ ಡೌನ್ಲೋಡ್, ತಾಂತ್ರಿಕ ಸಮಸ್ಯೆ, ನೆಟ್ವರ್ಕ್ ಸಮಸ್ಯೆ, ಒಟಿಪಿ ಬಾರದಿರುವಂತಹ ಸಮಸ್ಯೆ ಎದುರಿಸಿದ್ದಾರೆ.
You Might Also Like
TAGGED:ನೆಟ್ವರ್ಕ್