ಪ್ರೇಮಿಗಳ ದಿನದಂದೇ ಹಿಂದೂ ಹುಡುಗಿಗೆ ಪ್ರಪೋಸ್ ; ಮುಸ್ಲಿಂ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರ ಹಲ್ಲೆ

ಇಂದೋರ್ : ಪ್ರೇಮಿಗಳ ದಿನದಂದೇ ಹಿಂದೂ ಹುಡುಗಿಗೆ ಮುಸ್ಲಿಂ ಯುವಕನೋರ್ವ ಪ್ರಪೋಸ್ ಮಾಡಿದ್ದು, ಮುಸ್ಲಿಂ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬುಧವಾರ ಪ್ರೇಮಿಗಳ ದಿನದಂದು ಮುಸ್ಲಿಂ ಯುವಕ ಹಿಂದೂ ಎಂದು ನಟಿಸಿ ಹುಡುಗಿಗೆ ಪ್ರಪೋಸ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಮಾಹಿತಿ ಬಜರಂಗದಳದ ಕಾರ್ಯಕರ್ತರಿಗೆ ತಲುಪಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಯುವಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಅರ್ಷದ್ ಎಂಬ ಯುವಕ ಹರ್ಷ ಎಂಬ ಹೆಸರಿನಲ್ಲಿ ಹುಡುಗಿಯನ್ನು ಪರಿಚಯ ಮಾಡಿಕೊಂಡು ಪ್ರಫೋಸ್ ಮಾಡಿದ್ದಾನೆ, ಆದರೆ ಇದಕ್ಕೆ ಹುಡುಗಿ ಒಪ್ಪಲಿಲ್ಲ. ಈ ವಿಚಾರ ತಿಳಿದ ಬಜರಂಗದಳದ ಕಾರ್ಯಕರ್ತರು ಅವನನ್ನು ಹಿಡಿದು ಥಳಿಸಿ ಪೊಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read