ʼರಿಜಿಸ್ಟ್ರೇಷನ್ʼ ಮಾಡಿಸಿದ ತಕ್ಷಣ ಆಸ್ತಿ ನನ್ನದಾಯಿತು ಎಂದು ಭಾವಿಸಬೇಡಿ; ಬಹುಮುಖ್ಯವಾಗುತ್ತೆ ಬಳಿಕದ ಈ ಪ್ರಕ್ರಿಯೆ

ಮನೆ ಅಥವಾ ಜಮೀನು ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಸಾಕು, ನಾನು ಈಗ ಆಸ್ತಿಯ ಮಾಲೀಕನಾದೆ ಎಂದು ಭಾವಿಸಿದರೆ ಅದು ತಪ್ಪು ತಿಳುವಳಿಕೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಆಸ್ತಿಯ ಮಾಲೀಕತ್ವ ಸಿಗುವುದಿಲ್ಲ. ಅದು ಕೇವಲ ಆಸ್ತಿಯ ಹಕ್ಕಿಗೆ ಅರ್ಹತೆ ಪಡೆಯಲು ಸಹಾಯ ಮಾಡುವ ದಾಖಲೆ.

ರಿಜಿಸ್ಟ್ರೇಷನ್ ಎಷ್ಟು ಮುಖ್ಯವೋ ಅಷ್ಟೇ ಮ್ಯೂಟೇಷನ್ ಕೂಡ ಮುಖ್ಯ. ಮ್ಯೂಟೇಷನ್ ಎಂದರೆ ಹೆಸರು ವರ್ಗಾವಣೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಸಾಕು ಎಂದು ಭಾವಿಸುವುದು ತಪ್ಪು. ಭವಿಷ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಮ್ಯೂಟೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಮನೆ ಅಥವಾ ಜಮೀನು ಖರೀದಿಸಿದಾಗ ಸೇಲ್ ಡೀಡ್ ಮಾಡಿಸಿಕೊಂಡರೆ ಸಾಕು ಎಂದು ಭಾವಿಸುತ್ತಾರೆ. ಆದರೆ ಸೇಲ್ ಡೀಡ್ ಮತ್ತು ಟ್ರಾನ್ಸ್‌ಫರ್ ಎರಡು ಬೇರೆ ವಿಷಯ. ರಿಜಿಸ್ಟ್ರೇಷನ್ ಆದರೆ ಆಸ್ತಿಯ ಮಾಲೀಕತ್ವ ವರ್ಗಾವಣೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದು ಸರಿಯಲ್ಲ.

ಯಾವುದೇ ಆಸ್ತಿಯ ವರ್ಗಾವಣೆಯಾಗುವವರೆಗೂ ಅದು ಯಾರ ಹೆಸರಿನಲ್ಲೂ ಇರುವುದಿಲ್ಲ. ರಿಜಿಸ್ಟ್ರೇಷನ್ ಆದರೂ ಅದು ವರ್ಗಾವಣೆಯಾಗದಿದ್ದರೆ ಆಸ್ತಿಯ ಮಾಲೀಕತ್ವ ಯಾರ ಹೆಸರಿನಲ್ಲೂ ಇರುವುದಿಲ್ಲ.

ಮ್ಯೂಟೇಷನ್ ಹೇಗೆ ಮಾಡಿಸಿಕೊಳ್ಳಬಹುದು ?

ಭಾರತದಲ್ಲಿ ಮುಖ್ಯವಾಗಿ ಮೂರು ರೀತಿಯ ಸ್ಥಿರ ಆಸ್ತಿಗಳಿವೆ. ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಮತ್ತು ಮನೆಗಳು. ಈ ಮೂರು ರೀತಿಯ ಭೂಮಿಯ ವರ್ಗಾವಣೆ ವಿವಿಧ ರೀತಿಯಲ್ಲಿ ವಿವಿಧ ಸ್ಥಳಗಳಲ್ಲಿ ನಡೆಯುತ್ತದೆ. ಸೇಲ್ ಡೀಡ್ ಮೂಲಕ ಆಸ್ತಿ ಖರೀದಿಸಿದಾಗ ಅಥವಾ ಯಾವುದೇ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಾಗ ಆ ದಾಖಲೆಯೊಂದಿಗೆ ಸಂಬಂಧಪಟ್ಟ ಕಚೇರಿಗೆ ಹೋಗಿ ಆಸ್ತಿ ವರ್ಗಾವಣೆ ಮಾಡಿಸಿಕೊಳ್ಳಬೇಕು.

ಕೃಷಿ ಭೂಮಿಯ ರೆಕಾರ್ಡ್‌ ಸಂಬಂಧಿಸಿದ ಪಂಚಾಯಿತಿಯಲ್ಲಿ ಬಳಿ ಇರುತ್ತದೆ. ವಸತಿ ಭೂಮಿಯ ರೆಕಾರ್ಡ್‌ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಇರುತ್ತದೆ. ಕೈಗಾರಿಕಾ ಭೂಮಿಯ ರೆಕಾರ್ಡ್‌ ಪ್ರತಿ ಜಿಲ್ಲೆಯಲ್ಲಿರುವ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read