ಬೆಂಗಳೂರು : ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ ಕೆ ಶಿವಕುಮಾರ್ ಅವರ ದೂರದೃಷ್ಟಿ ಮತ್ತು ನೇತೃತ್ವದಲ್ಲಿ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ವರ್ಗಾವಣೆ ಪ್ರಾರಂಭಿಸಲಾಗಿದೆ. ನಾಗರಿಕರು ತಮ್ಮ ಆಸ್ತಿಯ ಬಾಕಿ ಇರುವ ಯಾವುದೇ ವರ್ಗಾವಣೆಗಳನ್ನು ಆನ್‌ಲೈನ್ ಮೂಲಕ ಈ ಕೆಳಗಿನಂತೆ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗಳನ್ನು ಪಡೆಯಬಹುದು ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಹೀಗೆ ಮಾಡಿ
1. ಜಾಲತಾಣ https://bbmpeaasthi.karnataka.gov.in ಗೆ ಭೇಟಿ ನಿಡಿ
2. “ಪ್ರಮುಖ ಸೂಚನೆಗಳು” ಅಡಿಯಲ್ಲಿ “ekhata Automatic Mutations – Get Your Mutation” ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಇ.ಪಿ.ಐ.ಡಿ ಸಂಖ್ಯೆಯ ಮೂಲಕ ಬಾಕಿ ಇರುವ ನಿಮ್ಮ ಇ-ಖಾತಾ ಮ್ಯುಟೇಷನ್ ನ್ನು ಹುಡುಕಿ.
4. ಮಾರಾಟಗಾರರ/ನೀಡುವವರ ಮತ್ತು ಖರೀದಿದಾರರ/ಸ್ವೀಕರಿಸುವವರ ಆಧಾರ್ ಇ-ಕೆವೈಸಿ ದೃಢೀಕರಣವನ್ನು ಮಾಡಿ.
5. ಮಾರಾಟಗಾರರ/ದಾನಿಗಳ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್‌ನೊಂದಿಗೆ ಹೆಸರಿನೊಂದಿಗೆ ಹೊಂದಾಣಿಕೆಯಾದರೆ, 7 ದಿನಗಳ ಆಕ್ಷೇಪಣಾ ಅವಧಿಯ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
ಸೂಚನೆ: ಯಾವುದೇ ವಿವಾದಿತ ಪ್ರಕರಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಯಿಂದ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು.
