 ಕೊಡಗು :   ಆಸ್ತಿ ವಿವಾದಕ್ಕೆ  ತಮ್ಮಂದಿರೇ  ಅಣ್ಣನನ್ನು ಅಟ್ಟಾಡಿಸಿ  ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದ ಭೀಕರ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆ ಬಳಿಯ ಚೆಂಬು ಗ್ರಾಮದಲ್ಲಿ ನಡೆದಿದೆ.
ಕೊಡಗು :   ಆಸ್ತಿ ವಿವಾದಕ್ಕೆ  ತಮ್ಮಂದಿರೇ  ಅಣ್ಣನನ್ನು ಅಟ್ಟಾಡಿಸಿ  ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದ ಭೀಕರ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆ ಬಳಿಯ ಚೆಂಬು ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿವಾದದ ಹಿನ್ನೆಲೆ ತಮ್ಮಂದಿರೇ ಅಣ್ಣ ಉಸ್ಮಾನ್ ಎಂಬಾತನನ್ನು ಬರ್ಬರವಾಗಿ ಕೊಂದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ-ತಮ್ಮಂದಿರ ನಡುವೆ ಜಗಳ ಉಂಟಾಗಿದ್ದು, ಜಗಳ ತಾರಕಕ್ಕೇರಿ ಅಣ್ಣನನ್ನೇ ಬರ್ಬರವಾಗಿ ಕೊಂದಿದ್ದಾರೆ.
ಸದ್ಯ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

		 Loading ...
 Loading ... 