ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಣಿಗೆ ಜನರಲ್ ಪವರ್ ಆಟಾರ್ನಿ(ಜಿಪಿಎ) ಕಡ್ಡಾಯಗೊಳಿಸುವ ನೋಂದಣಿ ಕರ್ನಾಟಕ(ತಿದ್ದುಪಡಿ) ಅಧಿನಿಯಮ 2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು, ರಾಜ್ಯ ಪತ್ರ ಹೊರಡಿಸಿದ ದಿನದಿಂದಲೇ ಈ ಮಸೂದೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ನೋಂದಣಿ ಅಧಿನಿಯಮ 19008(1908ರ ಕೇಂದ್ರ ಅಧಿನಿಯಮ 16) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆ ಒಳಗೊಂಡ ಮಸೂದೆ ಇದಾಗಿದೆ. ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಟಲೀಕರಿಸುವ, ಪಾರದರ್ಶಕತೆ ಹೆಚ್ಚಿಸುವ ಬಗ್ಗೆ ಈ ತಿದ್ದುಪಡಿ ತರಲಾಗಿದೆ.
ಇನ್ನು ಮುಂದೆ ಆಸ್ತಿ ವರ್ಗಾವಣೆಗೆ ಮೊದಲು ನಡೆಸುವ ಜಿಪಿಎ ಕೂಡ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಆಸ್ತಿ ವರ್ಗಾವಣೆ ಸಮಯದಲ್ಲಿ ಪವರ್ ಆಫ್ ಅಟಾರ್ನಿ ಬರೆದು ಕೊಡುವವರು ಬದುಕಿರುವುದನ್ನು ಖಚಿತಪಡಿಸಲು ಸೂಕ್ತ ಪುರಾವೆ ಹಾಜರುಪಡಿಸಬೇಕು. ಇದು ಅಕ್ರಮ ಆಸ್ತಿ ವರ್ಗಾವಣೆ, ನೋಂದಣಿ, ಭೂಕಬಳಿಗೆ ಮತ್ತು ಒತ್ತುವರಿ ಪ್ರಕರಣಗಳನ್ನು ತಪ್ಪಿಸಲಿದೆ ಎಂದು ಹೇಳಲಾಗಿದೆ.