ಕ್ಯಾನ್ಸರ್​ ರೋಗಿಗೆ ವಿಐಪಿ ಸೀಟು ಬಿಟ್ಟುಕೊಟ್ಟ ಪ್ರಿಯಾಂಕಾ ಚೋಪ್ರಾ

ಸರೋಗಸಿ ಮೂಲಕ ಅಮ್ಮನಾಗಿರುವ ಪ್ರಿಯಾಂಕಾ ಚೋಪ್ರಾ ಈಗ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಿದ್ದರೂ, ಅವರು ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಲಾಸ್​ ವೇಗಾಸ್​ನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಇವರು ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ವಿಐಪಿ ಸೀಟು ನೀಡಲಾಗಿತ್ತು.

ಆದರೆ ಪ್ರಿಯಾಂಕಾ ಅವರು ಕ್ಯಾನ್ಸರ್ ರೋಗಿಯಾದ ಅಭಿಮಾನಿಯ ತಾಯಿಯೊಬ್ಬರಿಗೆ ವಿಐಪಿ ಸೀಟ್ ಬಿಟ್ಟುಕೊಟ್ಟಿದ್ದು ಸುದ್ದಿಯಾಗಿದ್ದಾರೆ.

ಲೀಸಾ ಡಾನ್ ಎಂದು ಗುರುತಿಸಲಾದ ಅಭಿಮಾನಿ, ಈ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಕ್ಯಾನ್ಸರ್ ರೋಗಿಯಾದ ತನಗೆ ಮತ್ತು ತಾಯಿಗೆ ವಿಐಪಿ ಸೀಟ್‌ಗಳನ್ನು ಪ್ರಿಯಾಂಕಾ ಚೋಪ್ರಾ ಹೇಗೆ ನೀಡಿದರು ಎಂಬುದನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಸಂಗೀತ ಕಛೇರಿಯ ವಿಡಿಯೋದೊಂದಿಗೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಸಂಗೀತ ಕಛೇರಿ ಅದ್ಭುತವಾಗಿರುತ್ತದೆ ಎಂದು ಹೋಗಿದ್ದೆ. ಆದರೆ ನಾನು ಅನಿರೀಕ್ಷಿತವಾಗಿ ಪ್ರಿಯಾಂಕಾ ಅವರನ್ನು ಭೇಟಿಯಾದೆ. ಅವರು ತಮ್ಮ ಸೀಟು ಬಿಟ್ಟುಕೊಟ್ಟರು. ಇದನ್ನು ನಾನು ಎಂದಿಗೂ ಮರೆಯಲಾರೆ ಎಂದಿದ್ದಾರೆ.

https://twitter.com/itslisae/status/1627427540737622016?ref_src=twsrc%5Etfw%7Ctwcamp%5Etweetembed%7Ctwterm%5E1627427540737622016%7Ctwgr%5E1b3db72cbe5350517890d70635ff5c0489fe0ddd%7Ctwcon%5Es1_&ref_url=https%3A%2F%2Fwww.india.com%2Fviral%2Fpriyanka-chopra-offers-vip-seats-elderly-cancer-patient-her-daughter-jonas-brothers-concert-5907048%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read