ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಶೋನಲ್ಲಿ ತೆಲುಗು ಸೂಪರ್‌ಹಿಟ್ ’ಆರ್‌ಆರ್‌ಆರ್’ ಚಿತ್ರದ ಕುರಿತು ನೀಡಿದ ಹೇಳಿಕೆಯಿಂದಾಗಿ ಮೀಮರ್‌ಗಳ ಗಾಳಕ್ಕೆ ಸಿಲುಕಿದ್ದಾರೆ. ’ಆರ್‌ಆರ್‌ಆರ್’ಅನ್ನು ಬಾಲಿವುಡ್ ಚಿತ್ರವೆಂದು ಸಂದರ್ಶಕ ಹೇಳಿದಾಗ ಅದನ್ನು ತಿದ್ದಲು ಹೊರಟ ಪ್ರಿಯಾಂಕಾ, ಎಸ್‌ಎಸ್ ರಾಜಮೌಳಿರ ಮೆಗಾ ಹಿಟ್ ಚಿತ್ರವನ್ನು ತಮಿಳು ಚಿತ್ರವೆಂದಿದ್ದಾರೆ.
ಸಂದರ್ಶನದುದ್ದಕ್ಕೂ ’ಆರ್‌ಆರ್‌ಆರ್’ಅನ್ನು ತಮಿಳು ಚಿತ್ರವೆಂದೇ ಹೇಳಿಕೊಂಡು ಹೊರಟ ಪ್ರಿಯಾಂಕಾ, ಈ ಚಿತ್ರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಆರ್‌ಆರ್‌ಆರ್‌ನ ಸ್ಕ್ರೀನಿಂಗ್‌ನಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ನಾಯಕ ನಟ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾರನ್ನು ಲಾಸ್ ಏಂಜಿಲಿಸ್‌ನಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿದ್ದರು.
ಪ್ರಿಯಾಂಕಾರಿಂದ ಗೊತ್ತಿಲ್ಲದೇ ಆದ ಈ ಒಂದು ತಪ್ಪು ಮೀಮರ್‌ಗಳಿಗೆ ಭರ್ಜರಿ ಅವಕಾಶ ಸೃಷ್ಟಿಸಿದೆ.
https://twitter.com/letscinema/status/1640961818213380096?ref_src=twsrc%5Etfw%7Ctwcamp%5Etweetembed%7Ctwterm%5E1640961818213380096%7Ctwgr%5Ed196798a28b4272b4ba886f62cf3107fee389df1%7Ctwcon%5Es1_&ref_url=https%3A%2F%2Fwww.news18.com%2Fbuzz%2Fpriyanka-chopra-correcting-us-interviewer-only-to-call-rrr-a-tamil-film-spurs-memes-7413217.html
https://twitter.com/gokulahd/status/1640962180643426304?ref_src=twsrc%5Etfw%7Ctwcamp%5Etweetembed%7Ctwterm%5E1640962180643426304%7Ctwgr%5Ed196798a28b4272b4ba886f62cf3107fee389df1%7Ctwcon%5Es1_&ref_url=https%3A%2F%2Fwww.news18.com%2Fbuzz%2Fpriyanka-chopra-correcting-us-interviewer-only-to-call-rrr-a-tamil-film-spurs-memes-7413217.html
https://twitter.com/s_kirantony/status/1640977503773941760?ref_src=twsrc%5Etfw%7Ctwcamp%5Etweetembed%7Ctwterm%5E1640977503773941760%7Ctwgr%5Ed196798a28b4272b4ba886f62cf3107fee389df1%7Ctwcon%5Es1_&ref_url=https%3A%2F%2Fwww.news18.com%2Fbuzz%2Fpriyanka-chopra-correcting-us-interviewer-only-to-call-rrr-a-tamil-film-spurs-memes-7413217.html