ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು: 17 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್​

ಕಡಲೂರು: ಎಂಟು ವರ್ಷಗಳ ಹಿಂದೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ 17.25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಡಲೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಚೆನ್ನೈನ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ಆದೇಶಿಸಿದೆ.

ಹೂವಿನ ಮಾರಾಟಗಾರ ವಿನೋದ್ ಕುಮಾರ್ ಎನ್ನುವವರು ಪತ್ನಿ ವಿ.ಕಲೈವಾಣಿಯನ್ನು ಫೆಬ್ರವರಿ 2014ರಂದು ಡೆಲಿವರಿಗೆ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಅವರ ಪತ್ನಿ ಮೃತಪಟ್ಟಿದ್ದರು. ರಕ್ತಸ್ರಾವವನ್ನು ತಡೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭಾಶಯ ತೆಗೆದುಹಾಕಿದ್ದರು.

ಆದರೆ ಗರ್ಭಕೋಶ ತೆಗೆದರೂ ರಕ್ತಸ್ರಾವ ನಿಲ್ಲದ ಕಾರಣ ವೈದ್ಯರು ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆಯ ಸ್ಥಿತಿ ಸುಧಾರಿಸಲಿಲ್ಲ. ಫೆಬ್ರವರಿ 16ರಂದು ಅವರು ನಿಧನರಾದರು.

ವೈದ್ಯರ ವಿರುದ್ಧ ವಿನೋದ್‌ ಕುಮಾರ್ ಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಿ. ಗೋಪಿನಾಥ್ ಮತ್ತು ಸದಸ್ಯರಾದ ವಿ ಎನ್ ಪಾರ್ತಿಬನ್ ಮತ್ತು ಟಿ ಕಲೈಯರಸಿ ಅವರು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ರಾಜ್ಯ ವೈದ್ಯಕೀಯ ಮಂಡಳಿಗೆ ಸೂಚಿಸಿದೆ. ಮಹಿಳೆಯ ಸಾವಿಗೆ ಆಸ್ಪತ್ರೆಯ ಸರಿಯಾದ ಆರೈಕೆಯ ಕೊರತೆಯೇ ಕಾರಣ ಎಂದು ಸಾಬೀತುಪಡಿಸಲು ಸಾಂದರ್ಭಿಕ ಪುರಾವೆಗಳಿವೆ ಎಂದು ಅದು ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read