BIG BREAKING: ರೋಡ್ ಶೋ ವೇಳೆಯಲ್ಲೇ ಭದ್ರತಾಲೋಪ, ಪ್ರಧಾನಿ ಮೋದಿ ಬಳಿಗೆ ನುಗ್ಗಿ ಬಂದ ಯುವಕ ವಶಕ್ಕೆ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ವೇಳೆಯಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಯುವಕನೊಬ್ಬ ಪ್ರಧಾನಿ ಮೋದಿ ಅವರ ವಾಹನದತ್ತ ನುಗ್ಗಿ ಬಂದಿದ್ದಾನೆ.

ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹೆಲಿಪ್ಯಾಡ್ ನಿಂದ ಮಹಾಸಂಗಮ ಕಾರ್ಯಕ್ರಮದ ವೇದಿಕೆಯತತ್ ಪ್ರಧಾನಿ ತೆರಳುವಾಗ ಘಟನೆ ನಡೆದಿದೆ.

ಕರ್ನಾಟಕದಲ್ಲಿಯೇ ಎರಡನೇ ಬಾರಿ ಭದ್ರತಾ ಲೋಪ ಉಂಟಾಗಿದೆ. ಪ್ರಧಾನಿ ಮೋದಿ ಇಂದು ದಾವಣಗೆರೆಯಲ್ಲಿ ಆಯೋಜಿಸಿದ್ದ ಮಹಾಸಂಗಮ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ರೋಡ್ ಶೋ ನಡೆಸುವಾಗ ಯುವಕ ಮೋದಿಯವರ ವಾಹನದ ಬಳಿಗೆ ನುಗ್ಗಿ ಬಂದಿದ್ದಾನೆ. ಆತನನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿಯೂ ಭದ್ರತಾ ಲೋಪ ಉಂಟಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read