ಮುಂದಿನ ವಾರ ಪ್ರಧಾನಿ ಮೋದಿಯಿಂದ ‘Howrah Maidan-Esplanade’ ಮೆಟ್ರೋ ಉದ್ಘಾಟನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಕೋಲ್ಕತ್ತಾ ಮೆಟ್ರೋದ ಬಹುನಿರೀಕ್ಷಿತ ಹೌರಾ ಮೈದಾನ-ಎಸ್ಪ್ಲನೇಡ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಕವಿ ಸುಭಾಷ್-ಹೇಮಂತ ಮುಖ್ಯೋಪಾಧ್ಯಾಯ ಮತ್ತು ತಾರತಾಲಾ-ಮಜೆರ್ಹತ್ ಮೆಟ್ರೋ ವಿಭಾಗಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.ಮಾರ್ಚ್ 4 ರಿಂದ 6 ರವರೆಗೆ ಮೋದಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಪೂರ್ವ ಪಶ್ಚಿಮ ಮೆಟ್ರೋ ಕಾರಿಡಾರ್ನಲ್ಲಿ ಕೋಲ್ಕತಾ ಮೆಟ್ರೋದ ಹೌರಾ ಮೈದಾನ-ಎಸ್ಪ್ಲನೇಡ್ ವಿಭಾಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಕವಿ ಸುಭಾಷ್-ವಿಮಾನ ನಿಲ್ದಾಣ ಮಾರ್ಗದ ಕವಿ ಸುಭಾಷ್-ಹೇಮಂತ ಮುಖ್ಯೋಪಾಧ್ಯಾಯ ಮೆಟ್ರೋ ವಿಭಾಗ ಮತ್ತು ಜೋಕಾ-ಎಸ್ಪ್ಲನೇಡ್ ಮಾರ್ಗದ ಭಾಗವಾಗಿರುವ ತಾರತಾಲಾ-ಮಜೆರ್ಹತ್ ವಿಭಾಗಕ್ಕೂ ಅವರು ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read