ದೇಶದ ಜನತೆಗೆ ಪ್ರಧಾನಿ ಮೋದಿ ಸಿಹಿ ಸುದ್ದಿ: ಸಬ್ಸಿಡಿ ದರದಲ್ಲಿ ಔಷಧ ವಿತರಿಸುವ ಜನೌಷಧಿ ಕೇಂದ್ರಗಳ ಸಂಖ್ಯೆ 25 ಸಾವಿರಕ್ಕೆ ಹೆಚ್ಚಳ

ನವದೆಹಲಿ: ಸಬ್ಸಿಡಿ ದರದಲ್ಲಿ ಔಷಧಗಳನ್ನು ಪೂರೈಸುವ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000 ಕ್ಕೆ ವಿಸ್ತರಿಸಲಾಗುವುದು.

ಈ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ವಿಕಸಿತ ಭಾರತ್ ಸಂಕಲ್ಪ ಯಾತ್ರೆ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಜನೌಷಧಿ ಕೇಂದ್ರಗಳ ಹೆಚ್ಚಳ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಏಮ್ಸ್ ನಲ್ಲಿ 10,000ನೇ ಜನೌಷಧಿ ಕೇಂದ್ರ ಉದ್ಘಾಟಿಸಿದ ಅವರು 15000 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಒದಗಿಸುವ ಡ್ರೋನ್ ದೀದೀ ಯೋಜನೆಗೂ ಚಾಲನೆ ನೀಡಿದ್ದಾರೆ. ರೈತರಿಗೆ ಕೃಷಿ ಉದ್ದೇಶಗಳಿಗೆ ಡ್ರೋನ್ ಸೇವೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read