BREAKING : ದೆಹಲಿಯಲ್ಲಿ ‘ಕರ್ತವ್ಯ ಭವನ’ ಉದ್ಘಾಟಿಸಿದ ಪ್ರಧಾನಿ ಮೋದಿ.! ಏನಿದರ ವಿಶೇಷತೆ ತಿಳಿಯಿರಿ |WATCH VIDEO

ನವದೆಹಲಿ : ಪ್ರಧಾನಿ ಮೋದಿ ದೆಹಲಿಯಲ್ಲಿ ಇಂದು ಕರ್ತವ್ಯ ಭವನ ಉದ್ಘಾಟಿಸಿದರು. 1.5 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಕರ್ತವ್ಯ ಭವನ ಪ್ರಮುಖ ಸಚಿವಾಲಯಗಳನ್ನು ಹೊಂದಿದೆ.ಈ ಹೊಸ ಕಟ್ಟಡವು ಈಗ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ಎಂಎಸ್‌ಎಂಇ, ಪೆಟ್ರೋಲಿಯಂ ಸಚಿವಾಲಯ ಮತ್ತು ಇತರ ಹಲವು ಪ್ರಮುಖ ಸಚಿವಾಲಯಗಳ ಕಚೇರಿಗಳನ್ನು ಹೊಂದಿದೆ.

ಏನಿದರ ವಿಶೇಷತೆ..?
ಇದು ಎರಡು ನೆಲಮಾಳಿಗೆಗಳು ಮತ್ತು ಏಳು ಹಂತಗಳಲ್ಲಿ (ನೆಲ + 6 ಮಹಡಿಗಳು) ಸುಮಾರು 1.5 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಅತ್ಯಾಧುನಿಕ ಕಚೇರಿ ಸಂಕೀರ್ಣವಾಗಲಿದೆ. ಇದು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, ಎಂ.ಎಸ್.ಎಂ.ಇ., ಡಿ.ಒ.ಪಿ.ಟಿ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿ.ಎಸ್.ಎ.) ಸಚಿವಾಲಯಗಳು/ಇಲಾಖೆಗಳ ಕಚೇರಿಗಳನ್ನು ಹೊಂದಿರುತ್ತದೆ.

ಹೊಸ ಕಟ್ಟಡವು ಐಟಿ-ಸಿದ್ಧ ಮತ್ತು ಸುರಕ್ಷಿತ ಕೆಲಸದ ಸ್ಥಳಗಳು, ಐಡಿ ಕಾರ್ಡ್ ಆಧಾರಿತ ಪ್ರವೇಶ ನಿಯಂತ್ರಣಗಳು, ಸಂಯೋಜಿತ ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ಒಳಗೊಂಡ ಆಧುನಿಕ ಆಡಳಿತ ಮೂಲಸೌಕರ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಡಬಲ್-ಗ್ಲೇಜ್ಡ್ ಮುಂಭಾಗಗಳು, ಮೇಲ್ಛಾವಣಿ ಸೌರಶಕ್ತಿ, ಸೌರ ಶಕ್ತಿಯ ಮೂಲಕ ಬಿಸಿ ನೀರಿನ ವ್ಯವಸ್ಥೆ, ಸುಧಾರಿತ ಎಚ್.ವಿ.ಎ.ಸಿ.(ತಾಪನ, ವಾತಾಯನ ಮತ್ತು ಹವಾನಿಯಂತ್ರಣ) ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ಒಳಗೊಂಡಿರುವ ಗೃಹ -4 (GRIHA-4) ರೇಟಿಂಗ್ ಗುರಿಯಾಗಿಸಿಕೊಂಡು ನಿರ್ಮಾಣವಾಗಿದ್ದು ಇದು ಸುಸ್ಥಿರತೆಯಲ್ಲಿಯೂ ಮುಂಚೂಣಿಯಲ್ಲಿರಲಿದೆ.
ಇಂಧನ ಬಳಕೆ 30%ರಷ್ಟು ಕಡಿಮೆ ಇರುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.

ಕಟ್ಟಡವನ್ನು ತಂಪಾಗಿಡಲು ಮತ್ತು ಹೊರಗಿನ ಶಬ್ದವನ್ನು ಕಡಿಮೆ ಮಾಡಲು ಇದು ವಿಶೇಷ ಗಾಜಿನ ಕಿಟಕಿಗಳನ್ನು ಹೊಂದಿದೆ. ಇಂಧನ ಉಳಿಸುವ ಎಲ್.ಇ.ಡಿ ದೀಪಗಳು, ಅಗತ್ಯವಿಲ್ಲದಿದ್ದಾಗ ದೀಪಗಳನ್ನು ನಂದಿಸುವಂತಹ (ಆಫ್ ಮಾಡುವ) ಸಂವೇದಕಗಳು, ವಿದ್ಯುತ್ ಉಳಿಸುವ ಸ್ಮಾರ್ಟ್ ಲಿಫ್ಟ್ಗಳು ಮತ್ತು ವಿದ್ಯುತ್ ಬಳಕೆಯನ್ನು ನಿರ್ವಹಿಸಲು ಸುಧಾರಿತ ವ್ಯವಸ್ಥೆ – ಇವೆಲ್ಲವೂ ಇಂಧನ/ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತವೆ. ಕರ್ತವ್ಯ ಭವನ – 03 ರ ಛಾವಣಿಯ ಮೇಲಿನ ಸೌರ ಫಲಕಗಳು ಪ್ರತಿ ವರ್ಷ 5.34 ಲಕ್ಷ ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ. ಸೌರ ವಾಟರ್ ಹೀಟರ್ಗಳು ದೈನಂದಿನ ಬಿಸಿನೀರಿನ ಅಗತ್ಯದ ಕಾಲು ಭಾಗಕ್ಕಿಂತ ಹೆಚ್ಚಿನದನ್ನು ಪೂರೈಸುತ್ತವೆ. ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸಹ ಒದಗಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read