ಪ್ರಧಾನಿ ಮೋದಿ ಅವರೇ ನಿಮ್ಮ ನವ ಭಾರತದಲ್ಲಿ ಬಡವರನ್ನೂ ಬದುಕಲು ಬಿಡಿ-ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪ್ರಧಾನಿ ಮೋದಿ ಅವರೇ ನಿಮ್ಮ ನವ ಭಾರತದಲ್ಲಿ ಬಡವರನ್ನೂ ಬದುಕಲು ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಟ್ವೀಟ್ ಮಾಡಿದ ಸಿದ್ದರಾಮಯ್ಯ ದೇಶದ ಬಡಜನರ ಸಾರಿಗೆ ಎಂದೇ ಕರೆಯಲ್ಪಡುವ ರೈಲುಗಳೀಗ ಬಡಜನರಿಂದ ಬಲುದೂರ ಓಡುತ್ತಿವೆ. ಇತರೆ ರೈಲುಗಳಲ್ಲಿ ಇರುವಂತೆ ವಂದೇ ಭಾರತ್ ರೈಲಿನಲ್ಲಿ ಸಾಮಾನ್ಯ ಬೋಗಿಗಳೇ ಇಲ್ಲ, ಬರಿ ಎಕ್ಸಿಕ್ಯುಟಿವ್ ಮತ್ತು ಎಸಿ ಚೇರ್ ಕಾರ್ ಮಾತ್ರವೇ ಇದೆ. 400 ಕಿ.ಮೀ ಪ್ರಯಾಣಕ್ಕೆ ₹2,450 ತೆತ್ತು ಬಡವರು ರೈಲಿನಲ್ಲಿ ಪ್ರಯಾಣಿಸುವರೇ? ಮೇಲ್ವರ್ಗದ ಜನರಿಗೆ ಮಾತ್ರ ಕೈಗೆಟುಕುವ ರೈಲು ಸೇವೆಯನ್ನು ದೇಶದ ಸಾಧನೆ ಎಂದು ಭಾರತೀಯರು ಏಕೆ ಕೊಂಡಾಡಬೇಕು? ಪ್ರಧಾನಿ ಮೋದಿ ಅವರೇ, ನಿಮ್ಮ ನವ ಭಾರತದಲ್ಲಿ ಬಡವರ ಕಡೆಗೂ ಒಮ್ಮೆ ನೋಡಿ, ಅವರನ್ನೂ ಬದುಕಲು ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬಡಹುಡುಗಿಯೊಬ್ಬಳ ಸಾಧನೆಯ ಹಂಬಲಕ್ಕೆ ಬೆನ್ನೆಲುಬಾಗಿ ನಿಂತ ಗೃಹಲಕ್ಷ್ಮಿ ಯೋಜನೆಯ ಯಶೋಗಾಥೆಯಿದು. ನಾವು ಜನರ ಭಾವನೆಗಳನ್ನು ಗೌರವಿಸುತ್ತಾ, ಅವರ ಬದುಕಿಗೆ ಸ್ಪಂದಿಸುತ್ತೇವೆ.. ಭಾವನೆಗಳನ್ನು ಕೆರಳಿಸುವವರು ನಶಿಸಿಹೋಗುತ್ತಾರೆ, ಬದುಕಿಗೆ ಸ್ಪಂದಿಸುವವರು ಜನಮಾನಸದಲ್ಲಿ ಉಳಿಯುತ್ತಾರೆ.. ನಾವು ಕನ್ನಡಿಗರಿಗೆ ನೆಮ್ಮದಿಯ ಗ್ಯಾರಂಟಿ ನೀಡಿದ್ದೇವೆ.. ಈ ಕಾರಣಕ್ಕಾಗಿ ನಾಡಿನ ಜನ ಇಂದು ನಮ್ಮ ಜೊತೆಗಿದ್ದಾರೆ ಎಂದರು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read