‘ಲಂಗೋಟಿ ಮ್ಯಾನ್’ ಚಿತ್ರದ ವಿರುದ್ಧ ಸಿಡಿದೆದ್ದ ಪುರೋಹಿತರು : ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ..!

ಸಂಜೋತಾ ಭಂಡಾರಿ ನಿರ್ದೇಶನದ ಅಕಾಶ್ ರ್ಯಾಂಬೋ ಮತ್ತು ಸ್ನೇಹ ಖುಷಿ ಅಭಿನಯದ ಲಂಗೋಟಿ ಮ್ಯಾನ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಸದ್ಯ ಈ ಚಿತ್ರ ವಿವಾದಕ್ಕೆ ಈಡಾಗಿದ್ದು, ಒಂದು ವೇಳೆ ಈ ಸಿನಿಮಾ ರಿಲೀಸ್ ಆದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅರ್ಚಕರು ಹಾಗೂ ಪುರೋಹಿತರ ಪರಿಷತ್ ಎಚ್ಚರಿಕೆ ನೀಡಿದೆ.

ಒಂದು ಸಮುದಾಯದ ಬಗ್ಗೆ ಅಪಹಾಸ್ಯ ಮಾಡುವುದು ತಪ್ಪು , ಸಿನಿಮಾದ ಟೈಟಲ್ ಒಂದು ಸಮುದಾಯಕ್ಕೆ ಅವಮಾನ ಮಾಡುವ ಹಾಗಿದೆ. ಈ ಸಿನಿಮಾವನ್ನು ಬ್ಯಾನ್ ಮಾಡದಿದ್ರೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಇದು ನಮ್ಮ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಹೇಳಿದ್ದಾರೆ.ಲಂಗೋಟಿ ಮ್ಯಾನ್ ಚಿತ್ರವನ್ನು ಸಂಜೋತಾ ಭಂಡಾರಿ ನಿರ್ದೇಶಿಸಿದ್ದು, ಅಕಾಶ್ ರ್ಯಾಂಬೋ ಮತ್ತು ಸ್ನೇಹ ಖುಷಿ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read