ತಿರುಪತಿ ಅರ್ಚಕರು, ಟಿಟಿಡಿ ಅಧಿಕಾರಿಗಳನ್ನು ಟೀಕಿಸಿದ ಪ್ರಧಾನ ಅರ್ಚಕ ಸೇವೆಯಿಂದ ವಜಾ

ತಿರುಪತಿ: ತಿರುಪತಿ ತಿರುಮಲ ದೇವಸ್ಥಾನದ ಅರ್ಚಕರು ಮತ್ತು ಟಿಟಿಡಿ ಅಧಿಕಾರಿಗಳನ್ನು ಟೀಕಿಸಿದ ಆರೋಪದ ಮೇಲೆ ಗೌರವ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಟಿಟಿಡಿ ಅಧಿಕಾರಿಗಳು ಮತ್ತು ಅರ್ಚಕರ ಬಗ್ಗೆ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರಮಣ ದೀಕ್ಷಿತುಲು ವಿಡಿಯೋ ಹರಿಬಿಟ್ಟಿದ್ದರು. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳು ಆಗಮ ಶಾಸ್ತ್ರಗಳ ಪ್ರಕಾರ ನಡೆಯುತ್ತಿಲ್ಲ. ದೇವಾಲಯದ ಆವರಣದಲ್ಲಿ ಕೆಲವು ಕಾಮಗಾರಿಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ. ತಿರುಮಲದಲ್ಲಿ ಕ್ರೈಸ್ತ ಧರ್ಮ ಹೆಚ್ಚಾಗಿ ವ್ಯಾಪಿಸುತ್ತಿದೆ ಎಂದು ವಿಡಿಯೋದಲ್ಲಿದೆ.

ಆದರೆ, ಈ ವಿಡಿಯೋ ತಿರುಚಲಾಗಿದೆ. ನಾನು ಯಾರ ವಿರುದ್ಧವೂ ಆರೋಪ ಮಾಡಿಲ್ಲವೆಂದು ದೀಕ್ಷಿತುಲು ಹೇಳಿದ್ದರು. ಸೋಮವಾರ ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಪ್ರಧಾನ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರನ್ನು ಸೇವೆಯಿಂದ ವಜಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read