ಬೆಂಗಳೂರು :ಸತ್ಯನಾರಾಯಣ ಪೂಜೆಗೆ ಬಂದಿದ್ದ ಅರ್ಚಕನೇ ಮನೆಯಲ್ಲಿ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.
ಸತ್ಯನಾರಾಯಣ ಪೂಜೆಗೆ ಬಂದಿದ್ದ ಅರ್ಚಕ ದೇವರಿಗೆ ಹಾಕಿದ್ದ 44 ಗ್ರಾಂ ಚಿನ್ನದ ಸರ ಎಗರಿಸಿ ರಮೇಶ್ ಶಾಸ್ತ್ರಿ ಪರಾರಿಯಾಗಿದ್ದು, ಅರ್ಚಕ ರಮೇಶ್ ವಿರುದ್ಧ ದಂಪತಿಗಳು ದೂರು ನೀಡಿದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಅರ್ಚಕನ ಗೋವಾ ಕೆಸಿನೋ ಪ್ಲ್ಯಾನ್ ಬಯಲಾಗಿದೆ. ಮುತ್ತೂಟ್ ನಲ್ಲಿ ಚಿನ್ನದ ಸರ ಗಿರವಿ ಇಟ್ಟು ರಮೇಶ್ ಹಣ ಪಡೆದಿದ್ದನು. ಗೋವಾ ಕೆಸಿನೋದಲ್ಲಿ ಅರ್ಚಕ ರಮೇಶ್ ಶಾಸ್ತ್ರಿ ಹಣ ಕಳೆದುಕೊಂಡಿದ್ದನು. ಆದ್ದರಿಂದ ಶಾಸ್ತ್ರಿ ಕಳ್ಳತನಕ್ಕೆ ಇಳಿದಿದ್ದನು. ರಮೇಶ್ ಶಾಸ್ತ್ರಿ ಬಂಧಿಸಿದ ಮಾಗಡಿ ಪೊಲೀಸರು ಜೈಲಿಗಟ್ಟಿದ್ದಾರೆ.