ಪ್ರಭು ಶ್ರೀರಾಮನಿಗೆ ನಿಮ್ಮನ್ನು ಅರ್ಪಿಸಿಕೊಂಡ ರೀತಿ ಜನರಿಗೆ ಪ್ರೇರಣೆ: ಪ್ರಧಾನಿ ಮೋದಿ ಆಧ್ಯಾತ್ಮಿಕ ಕಾರ್ಯ ಶ್ಲಾಘಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮೆಚ್ಚುಗೆ ಪತ್ರ

ನವದೆಹಲಿ: ಪ್ರಾಣ ಪ್ರತಿಷ್ಠಾಪನೆಯಂತಹ ಕಾರ್ಯಕ್ಕೆ ನೀವು ಆಯ್ಕೆ ಮಾಡಿಕೊಂಡ ಮಾರ್ಗ, ನಿಮ್ಮನ್ನು ನೀವು ಶುದ್ಧೀಕರಿಸಲು ಕೈಗೊಂಡ ಅನುಷ್ಠಾನ, ಪ್ರಭು ಶ್ರೀ ರಾಮನಿಗೆ ನಿಮ್ಮನ್ನು ಅರ್ಪಿಸಿಕೊಂಡ ರೀತಿ ಜನರಿಗೆ ಪ್ರೇರಣೆಯಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮೂರು ಹೇಳಿದ್ದಾರೆ.

ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ 11 ದಿನಗಳ ಅನುಷ್ಠಾನ ಕೈಗೊಂಡ ಮೋದಿಯವರ ಉನ್ನತ ಆಧ್ಯಾತ್ಮಿಕ ಕಾರ್ಯವನ್ನು ಸ್ಥಾಪಿಸಿ ಪತ್ರ ಬರೆದಿದ್ದಾರೆ. ನೂತನ ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ರಾಷ್ಟ್ರಪತಿಯಾಗಿ ಶ್ರೀ ರಾಮನ ಭಕ್ತಳಾಗಿ ನಿಮಗೆ ಶುಭ ಕೋರುತ್ತೇನೆ. ಈ ಸಂದರ್ಭದಲ್ಲಿ ದೇಶಾದ್ಯಂತ ಕಂಡು ಬಂದ ಸಡಗರ ಸಂಭ್ರಮ ಪ್ರಭು ಶ್ರೀ ರಾಮನನ್ನು ಕಾಣಲು ಜನರ ಉತ್ಸಾಹ ಭಾರತದ ಆತ್ಮವನ್ನು ಬಡಿದೆಬ್ಬಿಸಿದೆ ಎಂದು ರಾಷ್ಟ್ರಪತಿ ದ್ರೌಪದಿ ಮೂರು ಹೇಳಿದ್ದಾರೆ.

ತಮ್ಮ ಎರಡು ಪುಟಗಳ ಪಾತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರದ ಪುನರುತ್ಥಾನದಲ್ಲಿ ಹೊಸ ಪ್ರಾರಂಭಕ್ಕೆ ಸಾಕ್ಷಿಯಾಗುವುದು ಪ್ರತಿಯೊಬ್ಬರಿಗೂ ಅದೃಷ್ಟದ ಅನುಭವ ಎಂದು ಹೇಳಿದ್ದಾರೆ.

ರಾಷ್ಟ್ರಪತಿಯವರ ಪತ್ರಕ್ಕೆ ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕ ಸಮಾರಂಭದ ಶುಭ ಸಂದರ್ಭದಲ್ಲಿ ನಿಮ್ಮ ಶುಭಾಶಯಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಐತಿಹಾಸಿಕ ಕ್ಷಣವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಆದರೆ ನಮ್ಮ ಅಭಿವೃದ್ಧಿಯ ಪ್ರಯಾಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

https://twitter.com/rashtrapatibhvn/status/1749084717197217832

https://twitter.com/narendramodi/status/1749121353549271280

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read