ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅದ್ಯಾವ ಮಟ್ಟಿಗೆ ಟ್ರೆಂಡ್ ಆಗುತ್ತಿದೆಯೆಂದರೆ, ಆಸ್ಕರ್‌ ಪ್ರಶಸ್ತಿ ಬಂದಾಗಿನಿಂದ ಈ ಹಾಡು ಗೂಗಲ್ ಸರ್ಚ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆನ್ಲೈನ್ ಕಂಟೆಂಟ್ ಸೃಷ್ಟಿಕರ್ತರು ಇದೇ ಹಾಡಿನ ಮೇಲೆ ಸಾಕಷ್ಟು ಬಗೆಯಲ್ಲಿ ಕಂಟೆಂಟ್ ಮಾಡುತ್ತಿದ್ದಾರೆ.

ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಸಹ ಈ ನಾಟು ನಾಟು ಹಾಡಿಗೆ ಫಿದಾ ಆದವರಲ್ಲಿ ಒಬ್ಬರು. ರಾಮ್ ಚರಣ್ ತೇಜಾರಿಂದ ಖುದ್ದು ಈ ಹಾಡಿಗೆ ನೃತ್ಯ ಮಾಡುವುದನ್ನು ಕಲಿಯುತ್ತಿರುವ ತಮ್ಮದೇ ವಿಡಿಯೋ ಶೇರ್‌ ಮಾಡಿರುವ ಮಹೀಂದ್ರಾ, ಈ ಬಾರಿ ಎಂಎಂ ಕೀರವಾಣಿಯವರ ನಾಟು ನಾಟು ಅದ್ಯಾವ ಮಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಹವಾ ಎಬ್ಬಿಸಿದೆ ಎಂದು ತೋರುವ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.

ಇಡೀ ಜಗತ್ತು ನಾಟು ನಾಟು ನೃತ್ಯವನ್ನು ಅನುಕರಣೆ ಮಾಡಲು ನೋಡುತ್ತಿರುವ ಈ ಅವಧಿಯಲ್ಲಿ, ಸೂತ್ರದ ಗೊಂಬೆಯೊಂದು ಇದೇ ಹಾಡಿನ ಸ್ಟೆಪ್‌ಗಳನ್ನು ಹೇಗೆ ಅದ್ಭುತವಾಗಿ ಹಾಕುತ್ತಿದೆ ಎಂದು ತೋರುವ ವಿಡಿಯೋವೊಂದನ್ನು ಮಹೀಂದ್ರಾ ಟ್ವಿಟರ್‌ನಲ್ಲಿ ಹಾಕಿದ್ದಾರೆ.

“ಓಕೆ ನಾಟು ನಾಟು ಮೇಲಿನ ಒಂದು ಕೊನೆಯ ಟ್ವಿಟ್ ಇದು ಎಂದು ಮಾತು ಕೊಡುತ್ತೇನೆ. ಆದರೆ ಈ ವಿಡಿಯೋ ಶೇರ್‌ ಮಾಡದೇ ಇರಲು ಆಗಲಿಲ್ಲ. ಈ ಹಾಡು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇಡೀ ಜಗತ್ತನ್ನು ಕುಣಿಸುತ್ತಿದೆ ಎಂಬುದಕ್ಕೆ ಮತ್ತೊಂದು ಅಸಲೀ ಸಾಕ್ಷಿ,” ಎಂದು ಆನಂದ್ ಮಹಿಂದ್ರಾ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿ ಶೇರ್‌ ಮಾಡಿದ್ದಾರೆ.

https://twitter.com/anandmahindra/status/1638556203604398080?ref_src=twsrc%5Etfw%7Ctwcamp%5Etweetembed%7Ctwterm%5E1638556203604398080%7Ctwgr%5E31cbe3501685ce24ac104498bba1ef2b4ae440aa%7Ctwcon%5Es1_&ref_url=https%3A%2F%2Fwww.news18.com%2Fbuzz%2Fpresenting-real-evidence-of-naatu-naatu-being-a-global-phenomenon-courtesy-anand-mahindra-7364599.html

https://twitter.com/BenzingaIndia/status/1638556549923889152?ref_src=twsrc%5Etfw%7Ctwcamp%5Etweetembed%7Ctwterm%5E1638556549923889152%7Ctwgr%5E31cbe3501685ce24ac104498bba1ef2b4ae440aa%7Ctwcon%5Es1_&ref_url=https%3A%2F%2Fwww.news18.com%2Fbuzz%2Fpresenting-real-evidence-of-naatu-naatu-being-a-global-phenomenon-courtesy-anand-mahindra-7364599.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read