ಗರ್ಭಿಣಿಯರು ಇವುಗಳ ಸೇವನೆಯಿಂದ ದೂರವಿರಿ….!

ಗರ್ಭಿಣಿಯರು ಈ ಕೆಲವು ಆಹಾರಗಳನ್ನು ಸೇವಿಸದೆ ದೂರ ಉಳಿಯುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅವುಗಳು ಯಾವುವು ಎಂದಿರಾ?

ಗರ್ಭಿಣಿಯರು ತರಕಾರಿ ಹಣ್ಣುಗಳನ್ನು ಎಷ್ಟು ಸೇವಿಸಿದರೂ ಒಳ್ಳೆಯದು. ಆದರೆ ಕೆಲವು ಹಣ್ಣುಗಳು ದೇಹಕ್ಕೆ ಅದರಲ್ಲೂ ಭ್ರೂಣಕ್ಕೆ ಹಾನಿ ಮಾಡುವ ಸಾಧ್ಯತೆಗಳಿವೆ. ಅದರಲ್ಲಿ ಮೊದಲನೆಯದು ಪಪ್ಪಾಯ ಹಣ್ಣು. ಇದರ ಹಣ್ಣನ್ನಾಗಲಿ, ಕಾಯಿಯನ್ನಾಗಲಿ ಸೇವಿಸುವುದು ಒಳ್ಳೆಯದಲ್ಲ. ಇದರ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆಗಳೂ ಹೆಚ್ಚು.

ಅನನಾಸು ಹಣ್ಣನ್ನೂ ಗರ್ಭಿಣಿಯರು ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ವಿಪರೀತ ಆಮ್ಲೀಯ ಗುಣ ಇರುವುದರಿಂದ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ಇದನ್ನು ಗರ್ಭಿಣಿಯರು ಹೆಚ್ಚಾಗಿ ಸೇವಿಸಿದರೆ ಭ್ರೂಣಕ್ಕೆ ತೊಂದರೆಯಾಗಬಹುದು.

ಮಾವಿನ ಹಣ್ಣನ್ನು ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಸೇವಿಸುವುದರಲ್ಲಿ ತಪ್ಪಿಲ್ಲ. ಆದರೆ ಕೊನೆಯ ಮೂರು ತಿಂಗಳಲ್ಲಿ ಇದನ್ನು ಹೆಚ್ಚು ಸೇವಿಸದೆ ಇರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ಮಧುಮೇಹಕ್ಕೆ ಕಾರಣವಾಗಬಹುದು. ಸಕ್ಕರೆಯ ಅಂಶ ಮಗುವಿನ ತೂಕವನ್ನು ವಿಪರೀತ ಹೆಚ್ಚಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read