ಮೈಸೂರು: ತುಂಬುಗರ್ಭಿಣಿ ಪತ್ನಿ ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಅಪರಾಧಿಗೆ ಮರಣದಂಡನೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
35 ವರ್ಷದ ಮಣಿಕಂಠಸ್ವಾಮಿ ಶಿಕ್ಷೆಗೊಳಗಾದ ಅಪರಾಧಿ. ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಚಾಮೇಗೌಡನ ಹುಂಡಿ ಗ್ರಾಮದಲ್ಲಿ 2021ರ ಏಪ್ರಿಲ್ 28ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇದೀಗ ತೀರ್ಪು ಪ್ರಕಟಿಸಿದೆ.
ಅಪರಾಧಿ ಮಣಿಕಂಠಸ್ವಾಮಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಮಣಿಕಂಠಸ್ವಾಮಿ ತನ್ನ ಪತ್ನಿ ಮೇಲಿನ ಅನುಮಾನಕ್ಕೆ ಈ ಕೊಲೆ ಮಾಡಿದ್ದ. 9ತಿಂಗಳ ತುಂಬುಗರ್ಭಿಣಿ ಪತ್ನಿ ಗಂಗೆ, ತಾಯಿ ಕೆಂಪಮ್ಮ, ಒಂದುವರೆ ವರ್ಷದ ಮಗ ಹಾಗೂ ನಾಲ್ಕು ವರ್ಷದ ಮತ್ತೋರ್ವ ಮಗ ಸೇರಿ ಐವರನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಆರೋಪಿಯ ಅಪರಾಧ ಸಾಭೀತಾದ ಹಿನ್ನಲೆಯಲ್ಲಿ ಇದೀಗ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

 
			 
		 
		 
		 
		 Loading ...
 Loading ... 
		 
		 
		