ಬೆಂಗಳೂರು: ಸಾಫ್ಟ್ವೇರ್ ಇಂಜಿನಿಯರ್ ಪತ್ನಿ ನವ್ಯಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಜೆಪಿ ನಗರದ ಆವಲಹಳ್ಳಿಯ ಪತಿಯ ಮನೆಯಲ್ಲಿ ನಡೆದಿದೆ.
4 ವರ್ಷದ ಹಿಂದೆ ಟೆಕ್ಕಿ ಶೈಲೇಶ್ ಅವರೊಂದಿಗೆ ನವ್ಯಾ ಅವರ ಮದುವೆಯಾಗಿತ್ತು. ಗರ್ಭಿಣಿಯಾಗಿದ್ದ ನವ್ಯಾ ಅವರಿಗೆ ಪತಿಯ ಮನೆಯವರು ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಬೆಳಗ್ಗೆ 9:20ರ ಸುಮಾರಿಗೆ ನವ್ಯಾ ಪೋಷಕರಿಗೆ ಕರೆ ಮಾಡಿದ ಶೈಲೇಶ್ ನೇಣು ಬಿಗಿದುಕೊಂಡಿದ್ದ ನವ್ಯಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ.
ನವ್ಯಾ ಪೋಷಕರಿಗೆ ಕರೆ ಮಾಡಿ ಪತಿ ಶೈಲೇಶ್ ಮಾಹಿತಿ ನೀಡಿದ್ದಾನೆ. ಶೈಲೇಶ್ ಮತ್ತು ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸು ದಾಖಲಿಸಲಾಗಿದೆ. ನವ್ಯಾ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ನಾಳೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗುವುದು.