ಅನೈತಿಕ ಸಂಬಂಧದ ಶಂಕೆ; IRB ಯಲ್ಲಿ ಪೇದೆಯಾಗಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB ) ಕಾನ್ಸ್ ಟೇಬಲ್ ನ ಆಕೆಯ ಗಂಡನೇ ಗುಂಡು ಹಾರಿಸಿದ್ದಾನೆ. ತನ್ನ ಗಂಡನ ಭಾವನ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಕ್ಕಾಗಿ ಮಹಿಳಾ ಕಾನ್ಸ್ ಟೇಬಲ್ ಮೇಲೆ ಗುಂಡು ಹಾರಿಸಲಾಗಿದೆ. ಜಾರ್ಖಂಡ್‌ನ ರಾಂಚಿಯ ಮಂದರ್ ಪಿಎಸ್ ವ್ಯಾಪ್ತಿಯ ಜಂಜಾರಿ ಪಂಚಾಯತ್‌ನಲ್ಲಿ ಈ ಘಟನೆ ನಡೆದಿದೆ.

ಮಂಗಲ್ ಕುಜೂರ್ ಎಂಬ ಆರೋಪಿಯು ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ತಿಳಿದ ನಂತರ ಎರಡು ಗುಂಡುಗಳನ್ನು ಹಾರಿಸಿದ್ದಾನೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳಾ ಪೇದೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಜ್ಞೆ ಬಂದ ನಂತರ ಆಕೆ ಹೇಳಿಕೆ ನೀಡಿದ್ದು, ಭಿನ್ನಾಭಿಪ್ರಾಯದಿಂದ ತಾನು ಮತ್ತು ಪತಿ ವರ್ಷಗಟ್ಟಲೆ ಒಟ್ಟಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಗಂಡನಿಂದ ದೂರವಾದ ಆಕೆ ತನ್ನ ಭಾವನ ಜೊತೆಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಅವನ ಮಗುವಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಇದರಿಂದ ಕೋಪಗೊಂಡ ಮಂಗಲ್ ಆಕೆಯ ಮೇಲೆ ಗುಂಡು ಹಾರಿಸಿದ ಎನ್ನಲಾಗಿದೆ. ಮಹಿಳಾ ಕಾನ್ಸ್ ಟೇಬಲ್ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥವಾಗುವ ಹಂತದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read